ಕಾರವಾರ: ಅಂಕೋಲಾ ಶಿರೂರು ಘಟನೆಯಲ್ಲಿ ನಾಪತ್ತೆಯಾದ ಭಾರತ ಬೆಂಜ್ ಕಂಪನಿಯ ಲಾರಿಯ ಚಾಲಕನ ಮೊಬೈಲ್ ಆನ್ ಆಗಿತ್ತು ಎಂಬ ಸುದ್ದಿ ಸಂಚಲನ ಮೂಡಿಸಿದೆ.
ಜು.16 ರಂದು ನಡೆದ ಅಪಘಾತದಲ್ಲಿ ಜೊಯಿಡಾದಿಂದ ಶಿರೂರಿಗೆ ಹೊರಟಿದ್ದ ಲಾರಿ ಸಿಕ್ಕಿಹಾಕಿಕೊಂಡಿರುವುದು ಖಚಿತವಾಗಿತ್ತು. ಈ ಸಂಬಂಧ ಸಂಬಂಧಪಟ್ಟ ಲಾರಿ ಕಂಪನಿಯ ಮಾಲೀಕ ಅಬ್ದುಲ್ ಮುನಾಫ್ ಅಂಕೋಲಾ ಠಾಣೆಗೆ ದೂರು ನೀಡಿದ್ದರು.
ಲಾರಿಯ ಚಾಲಕ ಕೇರಳ ಕೊಜಿಕ್ಕೊಡೆಯ ಅರ್ಜುನ್ (30) ನಾಪತ್ತೆಯಾಗಿದ್ದಾರೆ.
ಅವರ ಮೊಬೈಲ್ ಶುಕ್ರವಾರ ಒಮ್ಮೆ ಆನ್ ಆಗಿತ್ತು ಎಂದು ಅರ್ಜುನ್ ಕುಟುಂಬದವರು ತಿಳುಸಿದ್ದಾರೆ. ಕೇರಳ ಸರ್ಕಾರ ಸಹ ಇದನ್ನು ದೃಢಪಡಿಸಿದೆ ಎಂದು ಅಲ್ಲಿನ ಸುದ್ದಿವಾಹಿನಿಗಳು ವರದಿ ಮಾಡುತ್ತಿವೆ. ಜಿಲ್ಲಾಡಳಿತ ಸರಿಯಾಗಿ ಕಾರ್ಯಾಚರಣೆ ಮಾಡುತ್ತಿಲ್ಲ ಎಂದು ದೂರಿವೆ.