ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದ 7.5 ಕಿಲೋಮೀಟರ್ ವಿಸ್ತೃತ ಮಾರ್ಗವು ಇಂದಿನಿಂದ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದೆ. ಪಶ್ಚಿಮ ವಿಸ್ತರಣೆ ಕಾರ್ಯಾಚರಣೆ ಮಾರ್ಗದಲ್ಲಿ ಮೈಸೂರು ರಸ್ತೆ ನಿಲ್ದಾಣದ ನಂತರ 6 ಹೊಸ ನಿಲ್ದಾಣಗಳು ಸೇರ್ಪಡೆಯಾಗಿವೆ – ನಾಯಂಡನಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳು.
ಕೆಂಗೇರಿ ಟರ್ಮಿನಲ್ನಿಂದ ಪ್ರಯಾಣಿಕರು ಟೋಕನ್ ಪಡೆದು ಸಂಚಾರ ಮಾಡುತ್ತಿದ್ದಾರೆ. ಇಂದು ಕೆಂಗೇರಿ ಮೆಟ್ರೊ ಸ್ಟೇಷನ್ನಿಗೆ ಬಂದ ಮೊದಲ ಪ್ರಯಾಣಿಕರನ್ನು ಬಿಎಂಆರ್ಸಿಎಲ್ ಸಿಬ್ಬಂದಿ ಹೂವು ನೀಡಿ ಸ್ವಾಗತಿಸಿದರು. ಮೆಟ್ರೊ ರೈಲು ಸಂಚಾರದ ವಿವರಗಳು ಈ ಕೆಳಗಿನಂತಿದೆ.
1. ರೈಲುಗಳ ಅಂತರ:
i) ಎಲ್ಲಾ ಕೆಲಸದ ದಿನಗಳಲ್ಲಿ -
ಜನದಟ್ಟಣೆ ಸಮಯದಲ್ಲಿ :
· ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ವಿಭಾಗ: 5 ನಿಮಿಷಗಳು
· ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ವಿಭಾಗ: 10 ನಿಮಿಷಗಳು
ಜನದಟ್ಟಣೆ ಇಲ್ಲದ ಸಮಯದಲ್ಲಿ :
· ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ವಿಭಾಗ: 10 ನಿಮಿಷಗಳು
ii) ಭಾನುವಾರ ಮತ್ತು ರಜಾದಿನಗಳಲ್ಲಿ ರೈಲುಗಳ ಅಂತರ:
· ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ವಿಭಾಗ: 10 ನಿಮಿಷಗಳು
2. ಎಲ್ಲಾ ದಿನಗಳಲ್ಲಿ ಟರ್ಮಿನಲ್ ನಿಲ್ದಾಣಗಳಿಂದ ರೈಲು ಹೊರಡುವ ಸಮಯ:
· ಟರ್ಮಿನಲ್ಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ಸಿಲ್ಕ್ ಇನ್ಸ್ಸ್ಟಿಟ್ಯೂಟ್ ನಿಂದ ಮೊದಲ ರೈಲು ಬೆಳಿಗ್ಗೆ 07:00 ಗಂಟೆಗೆ ಹೊರಡುತ್ತದೆ.
· ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ನಿರ್ಗಮನ -
i) ಬೈಯಪ್ಪನಹಳ್ಳಿಯಿಂದ ರಾತ್ರಿ 08:05 ಗಂಟೆಗೆ, ಕೆಂಗೇರಿಯಿಂದ ರಾತ್ರಿ 08:00 ಗಂಟೆಗೆ.
ii) ನಾಗಸಂದ್ರದಿಂದ ರಾತ್ರಿ 08:05 ಗಂಟೆಗೆ, ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ರಾತ್ರಿ 08.00 ಗಂಟೆಗೆ.
iii) ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಿಂದ ಎಲ್ಲಾ ನಿಲ್ದಾಣಗಳಿಗೆ ಕೊನೆಯ ರೈಲು ರಾತ್ರಿ 08:30 ಗಂಟೆಗೆ ಹೊರಡುತ್ತದೆ.
3. ಪ್ರಯಾಣ ದರ, ಅವಧಿ:
ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣ ದರ ರೂ. 56/-
ಮತ್ತು ತುಂಬಾ ಉದ್ದದ ಪ್ರಯಾಣ ಕೆಂಗೇರಿಯಿಂದ ಸಿಲ್ಕ್ ಇನ್ಸ್ಟಿಟ್ಯೂಟ್ಗೆ ರೂ. 60/-
ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣದ ಸಮಯ 52 ನಿಮಿಷಗಳು.