ಜಿಲ್ಲೆ

ನ್ಯಾಷನಲ್ ಟೀಚರ್ಸ್ ಸಮಿತ್‌ಗೆ ಕೆಂಗೇರಿ ಸರ್ಕಾರಿ ಪೌಢಶಾಲೆ ಶಿಕ್ಷಕ ಲಕ್ಷ್ಮಿಪ್ರಸಾದ್ ಆಯ್ಕೆ

ಬೆಂಗಳೂರು : ಸೇವಾ ನಿರತ ಪ್ರೌಢಶಾಲಾ ಶಿಕ್ಷಕರ ವೃತ್ತಿಪರ ಬೆಳವಣಿಗೆ ಮತ್ತು ನಾವಿನ್ಯಯುತವಾದ ಶೈಕ್ಷಣಿಕ ಉತ್ತಮ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಫೆ.13 ರಿಂದ 15ರವರೆಗೆ ಮುಂಬೈನಲ್ಲಿ ಆಯೋಜಿಸಲಾಗಿರುವ ರಾಷ್ಟ್ರಮಟ್ಟದ ಶೈಕ್ಷಣಿಕ ಕಾಯಾಗಾರಕ್ಕೆ ಬೆಂಗಳೂರಿನ ಕೆಂಗೇರಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಲಕ್ಷ್ಮಿಪ್ರಸಾದ್ ನಾಯಕ್ ಆಯ್ಕೆಯಾಗಿದ್ದಾರೆ.

ಕೋಟ್ಯಾಕ್ ಎಜುಕೇಶನ್ ಫೌಂಡೇಶನ್ ವತಿಯಿಂದ ಆಯೋಜಿಸಲ್ಪಟ್ಟಿರುವ ಇನ್ಸ್ಪೈರ್-ಎ ನ್ಯಾಷನಲ್ ಟೀಚರ್ಸ್ ಇನ್ನೋವೇಶನ್ ಸಮಿಟ್ 2024-25 ಕ್ಕೆ ಒಟ್ಟು 40 ಶಿಕ್ಷಕರು ದೇಶದ ವಿವಿಧೆಡೆಗಳಿಂದ ಆಯ್ಕೆಯಾಗಿದ್ದು, ಅದರಲ್ಲಿ ಲಕ್ಷ್ಮೀಪ್ರಸಾದ್ ಕೂಡ ಒಬ್ಬರು.

ಮೂಲತಃ ಉಡುಪಿ ಜಿಲ್ಲೆ ಬ್ರಹ್ಮಾವರದ ಹಂದಾಡಿ ಗ್ರಾಮದ ಜಯಂತಿ ಯು.ನಾಯಕ್ ಮತ್ತು ಉಪೇಂದ್ರ ನಾಯಕ್ ದಂಪತಿಗಳ ಪುತ್ರರಾಗಿರುವ ಲಕ್ಷ್ಮೀಪ್ರಸಾದ್ ರಾಜ್ಯ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿದ್ದು, ರಾಜ್ಯ ವಿಜ್ಞಾನ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕ ಭಾಷಾಂತರ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.