ಬೆಂಗಳೂರು: ಕೇದಾರ ಕಲಾ ಕುಟೀರ ಸಂಗೀತ ಶಾಲೆಯು ಇತ್ತಿಚೆಗೆ ಗಿರಿನಗರದ ಶಂಕರ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಹಾಗು ಶಾಲೆಯ ಸಂಸ್ಥಾಪಕಿ ವಿದುಷಿ ಪ್ರತಿಭಾ ಹೆಗಡೆ ನಡೆಸಿಕೊಟ್ಟ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಹಾಗು ಲಘು ಸಂಗೀತವು ಸಭಿಕರನ್ನು ಮಂತ್ರ ಮುಗ್ಧಗೊಳಿಸಿತು. ನಂತರ ಗಾಯತ್ರಿ ಹೆಗಡೆಯವರು ಪ್ರಸ್ತುತ ಪಡಿಸಿದ ಕಥಕ್ ನೃತ್ಯ ಎಲ್ಲರ ಗಮನ ಸೆಳೆಯಿತು.