

ಬೆಂಗಳೂರು: ಅಂಚೆ ಇಲಾಖೆಯು ನೀಡುತ್ತಿರುವ ವಿವಿಧ ಯೋಜನೆಗಳ ಸದುಪಯೋಗ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಮದ ಅಂಚೆ ಇಲಾಖೆಯು ಇತ್ತೀಚೆಗೆ ಜನಸಂಪರ್ಕ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಬೆಂಗಳೂರು ದಕ್ಷಿಣ ವಿಭಾಗದ ಜಯನಗರ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕರ ನೇತೃತ್ವದಲ್ಲಿ ರಾಜರಾಜೇಶ್ವರಿ ನಗರದ ಆರ್‌ಎನ್‌ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಈ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆರ್‌ಎನ್‌ಎಸ್ ಶಿಕ್ಷಣ ಸಂಸ್ಥೆಯ ಹಳೆಯ ಕ್ಯಾಂಟೀನ್‌ನಲ್ಲಿ ನಡೆದ ಜಾಗೃತಿ ಅಭಿಯಾನದಲ್ಲಿ ಅಂಚೆ ಇಲಾಖೆಯ ವಿವಿಧ ಯೋಜನೆಗಳು ಮತ್ತು ಅದರ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು. ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಾರ್ವಜನಿಕರು ಈ ಅಭಿಯಾನದ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಆರ್‌ಎನ್‌ಎಸ್ ಶಿಕ್ಷಣ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥರಾದ ಮುರಳಿಕೃಷ್ಣ ಕೆ. ಸಹಾಯಕ ರಿಜಿಸ್ಟ್ರಾರ್ ರಾಘವೇಂದ್ರ, ಪ್ರಾಧ್ಯಾಪಕರಾದ ಸುಧೀರ್ ಪೈ ಮತ್ತು ಪ್ರಾಂಶುಪಾಲರಾದ ರವಿಶಂಕರ್ ಹಾಗೂ ದಕ್ಷಿಣ ವಿಭಾಗದ ಹಿರಿಯ ಅಧೀಕ್ಷಕ ಪರ್ವೀನ್ಸಿಂಗ್ ಉಪಸ್ಥಿತರಿದ್ದರು.