ಬೆಂಗಳೂರು: ಸಿನಿಮಾ ಶೂಟಿಂಗ್ ಮಧ್ಯದಲ್ಲಿ ಸ್ಯಾಂಡಲ್ವುಡ್ ಮಂದಿ ಕ್ರಿಕೆಟ್ ಆಡಲು ಸಿದ್ಧರಾಗಿದ್ದಾರೆ. ಡಿಸೆಂಬರ್ 23, 24, 25ರಂದು ಕರ್ನಾಟಕ ಚಲನಚಿತ್ರ ಕಪ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಗಳಲ್ಲಿ ಸುದೀಪ್, ದುನಿಯ ವಿಜಿ, ಧನಂಜಯ, ಉಪೇಂದ್ರ ಸೇರಿದಂತೆ ಜನಪ್ರಿಯ ನಟರು ಹಾಗು, ಸುರೇಶ ರೈನಾ, ಮುರಳಿ ವಿಜಯ, ರಾಬಿನ್ ಉತ್ತಪ್ಪ ಸೇರಿ ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರು ಕೂಡ ಪಾಲ್ಗೊಳ್ಳಲಿದ್ದಾರೆ. ಓದುಗರ ಸಲುವಾಗಿ ವಿಜಯವಾಣಿ ಡಿಜಿಟಲ್ ವಿಶೇಷ ಕೆಸಿಸಿ-2023 ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದ್ದು, 3 ದಿನಗಳ ಕಾಲ ನಡೆಯಲಿದೆ. ಸ್ಪರ್ಧೆಯಲ್ಲಿ ಸರಿಯಾದ ಉತ್ತರ ನೀಡಿದ 15 ಜನ ಅದೃಷ್ಟಶಾಲಿಗಳಿಗೆ ಕ್ರಿಕೆಟ್ ಮ್ಯಾಚ್ಗಳ ಪಾಸ್ ಅನ್ನು ಬಹುಮಾನವಾಗಿ ನೀಡಲಾಗುತ್ತದೆ. ಪಂದ್ಯದ ಹಿಂದಿನ ದಿನವೇ ಅದೃಷ್ಟಶಾಲಿಗಳಿಗೆ ಪಾಸ್ ವಿತರಿಸಲಾಗುವುದು.
ಕಚೇರಿ ವಿಳಾಸ: #24, ಶ್ರೀ ಸಾಯಿರಾಂ ಟವರ್ಸ್, ಮೊದಲನೇ ಮಹಡಿ, ಕೆ.ಪಿ. ಪುಟ್ಟಣ್ಣ ಚೆಟ್ಟಿ ರಸ್ತೆ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018