More

    ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: ಬಂಧಿತರ ಕಸ್ಟಡಿ ಜ. 5ರವರೆಗೆ ವಿಸ್ತರಿಸಿದ್ದೇಕೆ?

    ನವದೆಹಲಿ: ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿ ಸಂಸತ್ತಿನ ಒಳಗೆ ನುಗ್ಗಿದ ಪ್ರಕರಣದಲ್ಲಿ ಬಂಧಿತರಾದವರು ಜನವರಿ 5 ರವರೆಗೆ ಪೊಲೀಸ್​ ಕಸ್ಟಡಿಯಲ್ಲಿ ಇರಲಿದ್ದಾರೆ.

    ದೆಹಲಿ ನ್ಯಾಯಾಲಯವು ಗುರುವಾರ ಲೋಕಸಭೆಯ ಭದ್ರತಾ ಉಲ್ಲಂಘನೆ ಪ್ರಕರಣದ ಆರೋಪಿಗಳನ್ನು ಜನವರಿ 5 ರವರೆಗೆ 15 ದಿನಗಳ ಕಾಲ ದೆಹಲಿ ಪೊಲೀಸ್ ವಿಶೇಷ ಸೆಲ್ ಕಸ್ಟಡಿಗೆ ಕಳುಹಿಸಿದೆ.

    ಹೆಚ್ಚಿನ ಪುರಾವೆಗಳನ್ನು ದೊರೆತಿದ್ದು, ಸಂಸತ್ತಿನ ಒಳಗೆ ನುಗ್ಗಿದವರನ್ನು ಪ್ರಶ್ನಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಆರೋಪಿಗಳ ಹೇಳಿಕೆಗಳನ್ನು ಪರಾಮರ್ಶಿಸುವ ಅಗತ್ಯವಿದ್ದು, ಒಳನುಗ್ಗಿದವರ ಮಾನಸಿಕ ವಿಶ್ಲೇಷಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸೋಷಿಯಲ್​ ಮೀಡಿಯಾದ ಇವರ ನಡೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ಮಾಹಿತಿಯು ತುಂಬಾ ಸೂಕ್ಷ್ಮವಾಗಿರುವುದರಿಂದ ಮತ್ತು ತನಿಖೆಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ ತಾವು ಪತ್ತೆ ಮಾಡಿದ ಸಂಗತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

    ಡಿಸೆಂಬರ್ 13 ರಂದು ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಲೋಕಸಭೆಗೆ ಅತಿಕ್ರಮ ಪ್ರವೇಶ ಮಾಡಿದ ಮನೋರಂಜನ್ ಮತ್ತು ಸಾಗರ್ ಶರ್ಮಾ, ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ಬಳಸಿ ಹೊಗೆ ಹಾಕಿದ ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಸೇರಿದ್ದಾರೆ. ಸಂಸತ್​ ಭದ್ರತಾ ಉಲ್ಲಂಘನೆಯ ಮಾಸ್ಟರ್ ಮೈಂಡ್ ಎಂದು ಪರಿಗಣಿಸಲಾದ ಲಲಿತ್ ಝಾ ಮತ್ತು ಝಾ ಅವರಿಗೆ ಸಹಾಯ ಮಾಡಿದ ಮಹೇಶ್ ಕುಮಾವತ್ ಕೂಡ ಬಂಧಿತರಲ್ಲಿ ಸೇರಿದ್ದಾರೆ.

    ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಗೆ ಲೋಕಸಭೆ ಅಸ್ತು: ವಿವಾದಾತ್ಮಕ ಹೊಸ ಕಾನೂನು ಏನು ಹೇಳುತ್ತದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts