More

    ನೇಹಾಳ ಹತ್ಯೆಗೆ ಹಿಂದು ಸಂಘಟನೆಗಳ ಆಕ್ರೋಶ

    ಮುಂಡರಗಿ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ತಾಲೂಕು ಹಿಂದು ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
    ಆರ್​ಎಸ್​ಎಸ್ ಜಿಲ್ಲಾ ಕಾರ್ಯವಾಹ ಮಂಜುನಾಥ ಇಟಗಿ ಮಾತನಾಡಿ, ಹುಬ್ಬಳ್ಳಿಯ ಕಾಲೇಜಿನ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರೀತಿಗೆ ನಿರಾಕರಿಸಿದರು ಎಂಬ ಕಾರಣಕ್ಕೆ ಫಯಾಜ್ ಎಂಬುವವರು ಅಮಾನುಷವಾಗಿ ಹತ್ಯೆ ಮಾಡಿರುವುದು ಖಂಡನೀಯ. ನೇಹಾಳನ್ನು ಕಾಲೇಜು ಕ್ಯಾಂಪಸ್​ನಲ್ಲಿ ಅಮಾನುಷವಾಗಿ ಹತ್ಯೆ ಮಾಡಿರುವ ಫಯಾಜ್​ನನ್ನು ನಡು ರಸ್ತೆಯಲ್ಲಿ ಎನ್​ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು.
    ತಾಲೂಕು ವೀರಮಹೇಶ್ವರ ಜಂಗಮ ಸಂಘದ ಅಧ್ಯಕ್ಷ ಎಸ್.ಬಿ. ಹಿರೇಮಠ ಮಾತನಾಡಿ, ನೇಹಾ ಹಿರೇಮಠ ಹತ್ಯೆ ಇಡೀ ಸಮಾಜ ತಲೆ ತಗ್ಗಿಸುವಂತ ಕೃತ್ಯ. ಇಂತಹ ಕೃತ್ಯ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಘೊಷಿಸಬೇಕು ಎಂದು ಒತ್ತಾಯಿಸಿದರು.
    ಕಲಕೇರಿ ಗ್ರಾ.ಪಂ. ಸದಸ್ಯ ಬಸವರಾಜ ದೇಸಾಯಿ, ಪ್ರಭಾವತಿ ಬೆಳವಣಿಕೆಮಠ, ಮಹಾಂತೇಶ ಕೊರಡಕೇರಿ ಮಾತನಾಡಿದರು. ತಹಸೀಲ್ದಾರ್ ಪರವಾಗಿ ಸಿಬ್ಬಂದಿ ಈರಣ್ಣ ದೊಡ್ಡಮನಿ ಮನವಿ ಸ್ವೀಕರಿಸಿದರು. ಶ್ರೀನಿವಾಸ ಕಟ್ಟಿಮನಿ, ದೇವಪ್ಪ ಇಟಗಿ, ಮಹೇಶ ನಾಗರಹಳ್ಳಿ, ಜಿ.ಕೆ. ಕೊಳ್ಳಿಮಠ, ನಾಗರಾಜ ಮುರಡಿ, ಪವನ ಚೋಪ್ರಾ, ಮಂಜುನಾಥ ಮುಧೋಳ, ಕುಮಾರ ಹಿರೇಮಠ, ಉಮೇಶ ಹಿರೇಮಠ, ವೀರೇಶ ಮುತ್ತಿನಪೆಂಡಿಮಠ, ಮುತ್ತು ಅಳವಂಡಿ, ವಿನಯ ಗಂಧದ, ಶಿವು ನವಲಗುಂದ, ಬಸವರಾಜ ಹಿರೇಮಠ, ಜಗದೀಶ ಪತ್ರಿಮಠ, ಕೊಟ್ರೇಶ ನವಲಿಹಿರೇಮಠ, ಚಂದ್ರು ಹಿರೇಮಠ, ವೀರೇಶ ಕಾಗನೂರಮಠ, ಹನುಮಂತ ಅಕ್ಕಸಾಲಿ, ಅಂದಪ್ಪ ಕಲ್ಲಳ್ಳಿ, ಗಂಗಾಧರ ಹಿರೇಮಠ, ಅಂದಪ್ಪ ಶೀರಿ, ಈಶ್ವರ ಹಮ್ಮಿಗಿಮಠ, ಶರಣಯ್ಯ ಅಳವಂಡಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts