ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಉಪನ್ಯಾಸ ಕಾರ್ಯಕ್ರಮವನ್ನು ತುಮಕೂರಿನ ಸ್ವಾಮಿ ವೀರೇಶಾನಂದ ಸರಸ್ವತಿ ಮಹಾರಾಜ್ ಉದ್ಘಾಟಿಸಿದರು. ಸ್ಥಳ ದಾನಿ ರಾಜಶೇಖರರೆಡ್ಡಿ, ನೇತ್ರ ತಜ್ಞ ಡಾ.ಚನ್ನನಗೌಡ ಪಾಟೀಲ್, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ್, ಕಲಾವಿದ ಅಮರೇಶ ಹೂಗಾರ ಇತರರಿದ್ದರು. 
ಜಿಲ್ಲೆ

ಕಾಯಕದಿಂದ ಹಿಂಜರಿಯದಿರಿ

ಸಿಂಧನೂರು: ಪ್ರತಿಯೊಬ್ಬರೂ ಸೋಮಾರಿತನ ಬಿಡಬೇಕು. ಸ್ವಾವಲಂಬನೆ ಬದುಕು ಕಟ್ಟಿಕೊಂಡು ನ್ಯಾಯ ಮಾರ್ಗದಲ್ಲಿ ನಡೆಯಬೇಕು ಎಂದು ತುಮಕೂರಿನ ಸ್ವಾಮಿ ವೀರೇಶಾನಂದ ಸರಸ್ವತಿ ಮಹಾರಾಜ್ ಹೇಳಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೋಪಕಾರ ಕಾರ್ಯಗಳನ್ನು ಮಾಡಬೇಕು. ಕಾಯಕದಿಂದ ಹಿಂಜರಿಯಬಾರದು. ದೇವರ ಪ್ರೀತಿಗೆ ಎಲ್ಲರೂ ಪಾತ್ರರಾಗುವುದು ಸುಲಭ.

ಆದರೆ, ನಂಬಿಕೆಗೆ ಪಾತ್ರರಾಗುವುದು ಕಷ್ಟ. ದೇವರು ಮಳೆ ಕೊಡುತ್ತಾನೆ. ಮಳೆ ಬಂದ ಮಾರನೆಯ ದಿನವೇ ರೈತರು ಕೃಷಿಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಅವರು ದೇವರ ನಂಬಿಕೆಗೆ ಪಾತ್ರರಾಗುತ್ತಾರೆಂದರು. ಸ್ಥಳ ದಾನಿ ರಾಜಶೇಖರರೆಡ್ಡಿ, ನೇತ್ರ ತಜ್ಞ ಡಾ.ಚನ್ನನಗೌಡ ಪಾಟೀಲ್, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ್, ಕಲಾವಿದ ಅಮರೇಶ ಹೂಗಾರ, ಶಿಕ್ಷಕ ಜಡೇಶ, ಪ್ರಮುಖರಾದ ರುದ್ರೇಗೌಡ, ಮಂಜುನಾಥ ಹಿರೇಮಠ ಇದ್ದರು.