ಕವಿತಾಳ ಸಮೀಪ ತುಂಗಭದ್ರಾ ಎಡದಂಡೆ ಮುಖ್ಯನಾಲೆಯ ಸೇತುವೆ ಕಾಮಗಾರಿಯನ್ನು ಶಾಸಕ ಹಂಪಯ್ಯನಾಯಕ ಮಂಗಳವಾರ ವೀಕ್ಷಿಸಿದರು. ಪ್ರಮುಖರಾದ ಪರಶುರಾಮ ದಿನ್ನಿ, ಮೃತ್ಯುಂಜಯ ಸ್ವಾಮಿ ಗುಗೆಬಾಳ, ಅಯ್ಯಳೆಪ್ಪ ತೋಳ, ಕರೆಯಪ್ಪ ಕವಿತಾಳ ಇತರರಿದ್ದರು. 
ಜಿಲ್ಲೆ

ಕಾಮಗಾರಿ ತ್ವರಿತ ಪೂರ್ಣಗೊಳ್ಳಲಿ; ಶಾಸಕ ಹಂಪಯ್ಯನಾಯಕ

ಕವಿತಾಳ: ಗುಗೆಬಾಳ ಹತ್ತಿರ ತುಂಗಭದ್ರಾ ಎಡದಂಡೆ ನಾಲೆಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ಶಾಸಕ ಹಂಪಯ್ಯನಾಯಕ ಮಂಗಳವಾರ ವೀಕ್ಷಣೆ ಮಾಡಿದರು.

ಬುಧವಾರದಿಂದ ನಾಲೆಗೆ ನೀರು ಬಿಡುಗಡೆ ಮಾಡಲಾಗುವದು. ನಾಲೆಯಲ್ಲಿ ಮರಳು ಮತ್ತು ಇತರ ವಸ್ತುಗಳನ್ನು ತೆರವು ಮಾಡಿ ಮಾನ್ವಿ ಮತ್ತು ಸಿರವಾರ ತಾಲೂಕಿನ ಭಾಗಕ್ಕೆ ನೀರು ತಲುಪಿಸಬೇಕು. ಸೇತುವೆ ಕಾಮಗಾರಿ ತ್ವರಿತವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಶಿವಣ್ಣ ವಕೀಲ, ಕರಿಯಪ್ಪ ಅಡ್ಡೆ, ಶರಣಬಸವ ಹಣಗಿ, ಅಕ್ಬರ್ ಎಡಿಎಮ್ ಇತರರಿದ್ದರು.