More

    ತುಂಗಭದ್ರಾ ನದಿ ಸಮೀಪ ತೆರಳದಂತೆ ಸೂಚನೆ

    ಸಾಸ್ವೆಹಳ್ಳಿ: ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮಗಳಿಗೆ ಸಾಸ್ವೆಹಳ್ಳಿ ನಾಡಕಚೇರಿ ಉಪತಹಸೀಲ್ದಾರ್ ಚಂದ್ರಪ್ಪ ಬುಧವಾರ ಭೇಟಿ ನೀಡಿ ವೀಕ್ಷಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯದ ನೀರು ನದಿಗೆ ಬಿಟ್ಟಿದ್ದರಿಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಸಮಯದಲ್ಲಿ ಜನರು ಜಾನುವಾರು ಮೇಯಿಸಲು, ಸ್ನಾನ ಮಾಡಿಸಲು, ನೀರು ಕುಡಿಸಲು, ಬಟ್ಟೆ ತೊಳೆಯಲು ಅಥವಾ ಇನ್ಯಾವುದೇ ಕೆಲಸದ ನಿಮಿತ್ತ ನದಿಗೆ ಹೋಗದಂತೆ ತಿಳಿಸಿದರು.

    ಸದ್ಯದ ಪರಿಸ್ಥಿತಿಯಲ್ಲಿ ಹೋಬಳಿಯ ಯಾವುದೇ ಗ್ರಾಮದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿಲ್ಲ. ಇದಕ್ಕೂ ಹೆಚ್ಚಿನ ಮಟ್ಟದಲ್ಲಿ ನೀರಿನ ಏರಿಕೆ ಕಂಡುಬಂದಲ್ಲಿ ಸಾಸ್ವೆಹಳ್ಳಿ ಸಮೀಪ ಹಳೆ ಐನೂರು ಗ್ರಾಮದ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ ಎಂದರು.

    ಇಲ್ಲಿನ ಜನವಸತಿ ಪ್ರದೇಶಕ್ಕೆ ನೀರು ನುಗ್ಗದಂತೆ ತಡೆಯಲು ಕಲ್ಲಿನ ರಿವಿಟ್‌ಮೆಂಟ್‌ನ ಕೆಲಸ ಪ್ರಗತಿಯಲ್ಲಿದ್ದು, ಇದು ಪೂರ್ಣಗೊಂಡಲ್ಲಿ ಜನರಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts