ಜಿಲ್ಲೆ

ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ; ಇಲ್ಲಿದೆ ಎಲ್ಲ ಮಾಹಿತಿ..

ಕೊಡಗು: ರಾಜ್ಯದಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದ್ದು, ಆ ಕುರಿತ ಮಾಹಿತಿಯನ್ನು ಸಂಬಂಧಿತ ಮೂಲಗಳಿಂದ ಬಹಿರಂಗಗೊಂಡಿದೆ. ರಾಜ್ಯದಲ್ಲಿ ವಾರ್ಷಿಕವಾಗಿ ನಡೆಯುವ ಈ ವಿಶೇಷ ವಿದ್ಯಮಾನಕ್ಕೆ ಅಸಂಖ್ಯಾತ ಭಕ್ತರು ಸಾಕ್ಷಿಯಾಗುತ್ತಾರೆ.

ಅಧಿಕೃತ ಮೂಲಗಳ ಪ್ರಕಾರ, ಪವಿತ್ರ ಕಾವೇರಿ ತೀರ್ಥೋದ್ಭವ ಅ. 17ರಂದು ನಡೆಯಲಿದೆ. ಅಂದು ರಾತ್ರಿ ಮೇಷ ಲಗ್ನದಲ್ಲಿ 7 ಗಂಟೆ 21 ನಿಮಿಷಕ್ಕೆ ಕಾವೇರಿ ದರ್ಶನ ನೀಡಲಿದ್ದಾಳೆ. ಇನ್ನು ಈ ಕುರಿತ ಧಾರ್ಮಿಕ ವಿಧಿ-ವಿಧಾನಗಳು ಸೆ. 27ರಂದೇ ಆರಂಭಗೊಳ್ಳಲಿವೆ.

ಸೆ. 27ರ ಬೆಳಗ್ಗೆ 11.05ಕ್ಕೆ ಭಾಗಮಂಡಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕಲಾಗುವುದು. ಅ. 5ರ ಬುಧವಾರ ಬೆಳಗ್ಗೆ 9.35ಕ್ಕೆ ಅಜ್ಞಾಮೂಹೂತ೯ ಇರಲಿದ್ದು, ಅ. 15ರ ಶನಿವಾರ ಬೆಳಗ್ಗೆ 11.45ಕ್ಕೆ ಅಕ್ಷಯ ಪಾತ್ರೆ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.