ಕುಂದಾಪುರ: ಕಟ್ಟಿನಮಕ್ಕಿ ಶ್ರೀ ಮಹಾಲಿಂಗೇಶ್ವರ ಕಲಾ ಸಂಘದ 7ನೇ ವಾರ್ಷಿಕೋತ್ಸವ ಕಟ್ಟಿನಮಕ್ಕಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೋಮವಾರ ನಡೆಯಿತು.
ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಆಲೂರು ಗ್ರಾಪಂ ಅಧ್ಯಕ್ಷ ರಾಜೇಶ್ ಎನ್.ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ ಕಳಿ, ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ ಹರ್ಕೂರು, ಆಲೂರು ಗ್ರಾಪಂ ಸದಸ್ಯರಾದ ಪ್ರಮೋದ ಕುಶಲ ಶೆಟ್ಟಿ, ರಾಜೇಂದ್ರ ದೇವಾಡಿಗ ಶುಭಹಾರೈಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವಿಖ್ಯಾತ ದೇವಾಡಿಗ, ಆಶಿಕಾ ದೇವಾಡಿಗ, ವರ್ಷದ ವ್ಯಕ್ತಿಯಾಗಿ ಶೀನ ದೇವಾಡಿಗ ಕಟ್ಟಿನಮಕ್ಕಿ ದೈವದಮನೆ, ಗಿಚ್ಚಿಗಿಲಿಗಿಲಿ ಖ್ಯಾತಿಯ ಪ್ರಸಾದ್ ಜೋಗಿ ಅವರನ್ನು ಗೌರವಿಸಲಾಯಿತು. ಕಲಾ ಸಂಘ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು. ದೀಪಾ ದೇವಾಡಿಗ ಸ್ವಾಗತಿಸಿದರು. ಸವಿತಾ ವಂದಿಸಿದರು. ವಿಜೇಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.