ಕಾರವಾರ:ನಗರದ ಕಾರವಾರ ಅರ್ಬನ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಗುರುದಾಸ ಬಾಂದೇಕರ್(55) ಸೋಮವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸದಾಶಿವಗಡ ಕಡೆಯಿಂದ ಕಾರವಾರ ಕಡೆಗೆ ತಮ್ಮ ಬೈಕ್‌ನಲ್ಲಿ ಬರುವಾಗ ಅವರು ಆರ್‌ಟಿಒ ಕಚೇರಿ ಸಮೀಪ ಬೈಕ್ ನಿಯಂತ್ರಣ ಕಳೆದುಕೊಂಡು ಮುಂದಿನ ಕಾರಿಗೆ ಡಿಕ್ಕಿ ಹೊಡೆದು ಬಿದ್ದಿದ್ದರು. ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಕಲ್ ಸವಾರ ಸಾವು
ಬೈಕ್ ಡಿಕ್ಕಿಯಾಗಿ ಸೈಕಲ್ ಸವಾರ ಮೃತಪಟ್ಟ ಘಟನೆ ಭಾನುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚೆಂಡಿಯಾ ಕೋಸ್ಟ್ಗಾರ್ಡ್ ಕಚೇರಿಯ ಎದುರು ನಡೆದಿದೆ.
ಚೆಂಡಿಯಾ ಗಾಂವಕರ್‌ವಾಡದ ಅತುಲ್ ಅನಿಲ್ ಆಚಾರಿ(24) ಮೃತರು. ಬೈಕ್ ಚಾಲಕ ಕಾರವಾರ ಮ್ಯಾಕ್ಸ್ ಮ್ಯಾನೇಜರ್ ಮಹೇಶ ಶ್ರೀಧರ ಹೆಗಡೆ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.