ಜಿಲ್ಲೆ

ಅಕ್ಟೋಬರ್‌ 15 ರಂದು ಕದಂಬ ನೌಕಾನೆಲೆಯಿಂದ ಕಾರವಾರ ರನ್ ಹಾಗೂ ಸೈಕ್ಲೋಥಾನ್‌

Uttara Kannada - Subash Hegde

ಕಾರವಾರ:ಇಲ್ಲಿನ ಕದಂಬ ನೌಕಾನೆಲೆಯಿಂದ ನೌಕಾದಿನದ ಅಂಗವಾಗಿ ಅಕ್ಟೋಬರ್ 15 ರಂದು ಕಾರವಾರ ರನ್ ಹಾಗೂ ಸೈಕ್ಲೋಥಾನ್‌ನ್ನು ಆಯೋಜಿಸಲಾಗಿದೆ. ಸಾರ್ವಜನಿಕರೂ ಇದರಲ್ಲಿ ಮುಕ್ತವಾಗಿ ಭಾಗವಹಿಸಬಹುದಾಗಿದೆ.
5 ಕಿಮೀ ಫನ್ ರನ್, 10 ಕಿಮೀಯ ಟೈಮ್ಡ್ ರನ್ ಹಾಗೂ 50 ಕಿಮೀಯ ಸೈಕ್ಲೋಥಾನ್ ಆಯೋಜಿಸಲಾಗುತ್ತಿದೆ. ಆಸಕ್ತರು ಭಾಗವಹಿಸಲು ವೆಬ್ ಸೈಟ್  http://www.runbuddies.club ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

1961 ರಲ್ಲಿ ಭಾರತೀಯ ನೌಕಾಸೇನೆ ಕಾರವಾರದ ಅಂಜುದೀವ್‌ ದ್ವೀಪವನ್ನು ಫೋರ್ಚುಗೀಸರಿಂದ ವಶಪಡಿಸಿಕೊಂಡ ನೆನಪಿಗಾಗಿ, ಭಾರತೀಯ ನೌಕಾಸೇನೆ 1971 ರಲ್ಲಿ ಪೂರ್ವ ಪಾಕಿಸ್ತಾನ ಯುದ್ಧ ಗೆದ್ದ ನೆನಪಿಗೆ ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ.

ಭಾಗವಹಿಸಿದವರಿಗೆ ಟಿ-ಶರ್ಟ್, ರೂಟ್ ಸಪೋರ್ಟ್ ಮ್ಯಾಪ್, ಟೈಮ್ಡ್ ರನ್ ಹಾಗೂ 50 ಕಿಮೀಯ ಸೈಕ್ಲೋಥಾನಲ್ಲಿ ಭಾಗವಹಿಸಿದವರಿಗೆ ಮಾತ್ರ ಟೈಮಿಂಗ್ ಚಿಪ್ ನೀಡಲಾಗುವುದು ಅಲ್ಲದೆ, ಎಲ್ಲರಿಗೆ ಫಿನಿಶರ್ ಮೆಡಲ್ ಹಾಗೂ ತಿಂಡಿ ನೀಡಲಾಗುವುದು. ಮಾತ್ರವಲ್ಲ ಇ-ಪ್ರಮಾಣಪತ್ರ ಸಹ ದೊರೆಯಲಿದೆ ಎಂದು ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.