ಜಿಲ್ಲೆ

ಸಿಎಂ ಸಿದ್ದರಾಮಯ್ಯ ಮಂಡಿಸಿದ್ದು ಹಲಾಲ್​ ಬಜೆಟ್​! ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಬಿಜೆಪಿ | Halal Budget

Halal Budget : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್​ 14) ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ಮುಸ್ಲಿಮರನ್ನು ಹೆಚ್ಚು ಓಲೈಕೆ ಮಾಡಲಾಗಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ, ಇದೊಂದು ಹಲಾಲ್​ ಬಜೆಟ್​ ಎಂದು ಜರಿದಿದೆ.

ಕರ್ನಾಟಕ ಬಜೆಟ್‌ ಅನ್ನು ಇಸ್ಲಾಮೀಕರಣಗೊಳಿಸಿರುವ ಸಿಎಂ ಸಿದ್ದರಾಮಯ್ಯ ಅವರೇ ಬಜೆಟ್​ನಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ನೀವು ಕೊಟ್ಟಿರುವುದು ಕೇವಲ ಚಿಪ್ಪು ಮಾತ್ರ ಎಂದು ಕಿಡಿಕಾರಿರುವ ಬಿಜೆಪಿ, ಮುಸ್ಲಿಮರಿಗೆ ಬಜೆಟ್​ನಲ್ಲಿ ನೀಡಿರುವ ಕೊಡುಗೆಗಳನ್ನು ಪಟ್ಟಿ ಮಾಡಿದೆ.

* ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ

* ಮುಸ್ಲಿಮರ ಸರಳ ಮದುವೆಗೆ 50 ಸಾವಿರ ರೂಪಾಯಿ

* ವಕ್ಫ್‌, ಖಬರಸ್ಥಾನಗಳ ಮೂಲಸೌಕರ್ಯಕ್ಕೆ 150 ಕೋಟಿ ರೂಪಾಯಿ

* ಮುಸ್ಲಿಮರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಲಕ್ಷ ರೂಪಾಯಿ

* ಮುಸ್ಲಿಮರು ಅತಿಹೆಚ್ಚು ವಾಸವಿರುವ ಪ್ರದೇಶದಲ್ಲಿ ITI ಸ್ಥಾಪನೆ

* KEA ಅಡಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಶುಲ್ಕ‌ ಕಡಿತ

* ಉಲ್ಲಾಳದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ವಸತಿ ಸಹಿತ ಪಿ.ಯು ಕಾಲೇಜು

* ಮುಸ್ಲಿಂ ವಿದ್ಯಾರ್ಥಿಗಳ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ ಏರಿಕೆ

* ಬೆಂಗಳೂರಿನ ಹಜ್‌ ಭವನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ

* ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ

ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ರಾಜ್ಯ ಕಾಂಗ್ರೆಸ್​ನ ದಿವಾಳಿ ಮಾಡೆಲ್‌ ಜಾರಿ ಆಗುತ್ತಿದೆ. ಕರ್ನಾಟಕದಲ್ಲಿ ಹಗರಣದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲಾಲ್ ಬಜೆಟ್ ಮಂಡಿಸಿದ್ದು, ಇದು ತುಷ್ಟೀಕರಣದ ಪರಾಕಾಷ್ಠೆ ಎಂದು ಬಿಜೆಪಿ ಟ್ವೀಟ್​ ಮೂಲಕ ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಿಡಿಕಾರಿದೆ.