ಜಿಲ್ಲೆ

ಗುಂಪಾಗಿ ನಿಂತಿದ್ದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ; BJP ಅಧ್ಯಕ್ಷ ಅರೆಸ್ಟ್​

ಚಿತ್ರದುರ್ಗ: ಗುಂಪಾಗಿ ನಿಂತಿದ್ದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿ ಮೇಲೆ ಬಿಜೆಪಿ (BJP) ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆಯು ಚಿತ್ರದುರ್ಗ ಜಿಲ್ಲೆಯ ತುರವನೂರು ರಸ್ತೆಯಲ್ಲಿ ನಡೆದಿದ್ದು, ಹಲ್ಲೆಗೊಳಗಾದ ಅಧಿಕಾರಿಯನ್ನು ಗಾದಿಲಿಂಗಪ್ಪ ಎಂದು ಗುರುತಿಸಲಾಗಿದೆ.

ತುರವನೂರು ರಸ್ತೆಯಲ್ಲಿರುವ ಹೋಟೆಲ್ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಘಟಕದ ಬಿಜೆಪಿ (BJP) ಅಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿದ್ದು, ಪೊಲೀಸ್​ ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಪೊಲೀಸರು ಹನುಮಂತೇಗೌಡರನ್ನು ಬಂಧಿಸಿದ್ದು, ಪೊಲೀಸರಿಂದಲೇ ತಮ್ಮ ಮೇಲೆ ಹಲ್ಲೆ ನಡೆದಿರುವುದಾಗಿ ಹನುಮಂತೇಗೌಡ ಆರೋಪಿಸಿದ್ದಾರೆ. ಇದಲ್ಲದೆ ಪ್ರತ್ಯಕ್ಷದರ್ಶಿ ಹಾಗೂ ಹನುಮಂತೇಗೌಡರ ಕಾರು ಚಾಲಕ ಕೂಡ ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರತ್ಯಕ್ಷದರ್ಶಿ ಹಾಗೂ ಹನುಮಂತೇಗೌಡರ ಕಾರು ಚಾಲಕ, ಊಟ ಮುಗಿಸಿ ಹೊರಡುವ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ನಮ್ಮ ಸಾಹೇಬರನ್ನು ಏಕವಚನ ಹಾಗೂ ಅವಾಚ್ಯ ಶಬ್ದದಿಂದ ನಿಂದಿಸಿದರು. ಆಗ ಪಿಎಸ್‌ಐಗೆ ನಮ್ಮ ಸಾಹೇಬರು ಕೂಡ ನಿಂದಿಸಿದ್ದು, ಪರಸ್ಪರ ಹಲ್ಲೆ ನಡೆಸಿದ ಪರಿಣಾಮ ಘಟನೆ ನಡೆಯಿತೆಂದು ತಿಳಿಸಿದ್ದಾರೆ.