ಬದಿಯಡ್ಕ: ಮಾನ್ಯ ಸಮೀಪದ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಬ್ರಹ್ಮಕಲಶೋತ್ಸವ 2025 ಮಾರ್ಚ್ 1ರಿಂದ 9ರತನಕ ಜರುಗಲಿದ್ದು, ಲಾಂಛನವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದ್ಯಮಿ ಮಧುಸೂದನ ಆಯರ್ ಭಾನುವಾರ ಶ್ರೀಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.
ಕುಂಜರಕಾನ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ್ ಭಟ್, ನಿವೃತ್ತ ಮುಖ್ಯಶಿಕ್ಷಕ ಮಾನ ಮಾಸ್ತರ್ ಕಾರ್ಮಾರು, ಟ್ರಸ್ಟಿ ಗೋಪಾಲ್ ಭಟ್ ಪಿ.ಎಸ್.ಪಟ್ಟಾಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಕಾರ್ಯಾಧ್ಯಕ್ಷ ರಾಮ ಕೆ.ಕಾರ್ಮಾರು, ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಪಂಚಾಯಿತಿಯ ಶ್ಯಾಮ್‌ಪ್ರಸಾದ್ ಮಾನ್ಯ, ಟ್ರಸ್ಟಿಗಳಾದ ರಾಧಾಕೃಷ್ಣ ರೈ ಕಾರ್ಮಾರು, ನವೀನ್ ಚಂದ್ರ ಪಿ.ಕೆ, ಮಹಿಳಾ ವೃಂದದ ಕಾರ್ಯದರ್ಶಿ ಸರಸ್ವತಿ ಕಾರ್ಮಾರು, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರಂಜಿತ್ ಯಾದವ್ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ಸ್ವಾಗತಿಸಿದರು. ಯುವಕ ವೃಂದದ ಅಧ್ಯಕ್ಷ ವಿಜಯ್ ಕುಮಾರ್ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.