ಕೊಲ್ಲಮೊಗ್ರು ಶಾಲೆಯಲ್ಲಿ, ಪದ್ಮನಾಭ ಗೋಳ್ಯಾಡಿ, ಸತೀಶ್ ಜೆ.ಜಾಲುಮನೆ, ಸೋಮಶೇಖರ್ ಮಾವಜಿ ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ನಿವೃತ್ತ ಯೋಧರಿಗೆ ಸನ್ಮಾನ

ಸೌಮ್ಯ ಆರ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಕೊಲ್ಲಮೊಗ್ರು ಕೆ.ವಿ.ಜಿ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನಡೆಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಎನ್.ಎಸ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೈನಿಕ ಪದ್ಮನಾಭ ಗೋಳ್ಯಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ನಿವೃತ್ತ ಯೋಧರಾದ ಪದ್ಮನಾಭ ಗೋಳ್ಯಾಡಿ, ಸತೀಶ್ ಜೆ.ಜಾಲುಮನೆ, ಸೋಮಶೇಖರ್ ಮಾವಜಿ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಮುಖ್ಯಶಿಕ್ಷಕ ಸುರೇಶ್ ಪಿ.ಕೆ, ಲಯನ್ಸ್ ಸ್ಥಾಪಕಾಧ್ಯಕ್ಷ ಪ್ರೊ.ಕೆ.ಆರ್.ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿದ್ದರು. ನಿಕಟಪೂರ್ವಾಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಕೃಷ್ಣ ಕುಮಾರ್ ಬಾಳುಗೋಡು, ಕೋಶಾಧಿಕಾರಿ ಮೋಹನದಾಸ ರೈ ಇದ್ದರು.

ಸದಸ್ಯರಾದ ಲೋಕೇಶ್ ಬಿ.ಎನ್, ದೀಪಕ್ ನಂಬಿಯಾರ್, ವಿಷ್ಣು ಪಾತಿಕಲ್ಲು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.