ಜಿಲ್ಲೆ

ಡಿಸೆಂಬರ್ 20 ರಿಂದ ಕರಾವಳಿ ಸಾಂಸ್ಕೃತಿಕ ಉತ್ಸವ

Uttara Kannada - Subash Hegde

ಕಾರವಾರ: ನಗರದ ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದದಲ್ಲಿ ಡಿಸೆಂಬರ್ 20 ರಿಂದ 24 ರ ವರೆಗೆ "ಕರಾವಳಿ ಸಾಂಸ್ಕೃತಿಕ ಉತ್ಸವ" ಆಯೋಜಿಸಲಾಗಿದೆ ಎಂದು ಜನಸ್ಪಂದನ ಸೇವಾ ಸಂಘದ ಅಧದಯಕ್ಷ ಗೌರೀಶ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಜನಸ್ಪಂದನ ಸೇವಾ ಸಂಘ ಹಾಗೂ ಕರಾವಳಿ ಸಾಂಸ್ಕೃತಿಕ ಉತ್ಸವ ಸಮಿತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 10 ರಿಂದ ಒಂದು ತಿಂಗಳವರೆಗೆ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಮಳಿಗಳನ್ನು ಹಾಕಲಾಗುತ್ತಿದೆ ಎಂದರು.
ಮಯೂರವರ್ಮ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ಬಾಲಿವುಡ್ ಹಿನ್ನೆಲೆ ಗಾಯಕ ನಿಹಾಲ್ ತೌರೋ ತಂಡ, ಜೋಸ್ನಾ ಮತ್ತು ತಂಡ, ಕನ್ನಡದ ಪಂಚಮ ಜೀವಾ ತಂಡ, ಕನ್ನಡದ ಕೋಗಿಲೆ ಖ್ಯಾತಿಯ ದಿವ್ಯ ರಾಮಚಂದ್ರ ತಂಡದಿಂದ ಒಂದೊಂದು ದಿನ ಆರ್ಕೆಸ್ಟ್ರಾ ನಡೆಯಲಿದೆ. ಅಲ್ಲದೆ, ರಾಷ್ಟ್ರಮಟ್ಟ ನೃತ್ಯ ಕಲಾ ತಂಡಗಳಿಂದ ನೃತ್ಯ, ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ, ಭರತನಾಟ್ಯಂ ಯಕ್ಷಗಾನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿಯ ಅನುಗುಣವಾಗಿ ರೂಪಕ ನೃತ್ಯ ನಡೆಯಲಿದೆ ಎಂದರು.
ಸತೀಶ ಸೈಲ್ ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿದ್ದಾರೆ. ಸಚಿವ ಮಂಕಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸುವರು. ಎಂಎಲ್‌ಸಿ ಗಣಪತಿ ಉಳ್ವೇಕರ್ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು. ತಮ್ಮ ಕಲಾ ಪ್ರದರ್ಶನ ಪ್ರದರ್ಶಿಸಲು ಇಚ್ಛಿಸುವವರು, ಹಾಗೂ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಭಾಘವಹಿಸಲು ಇಚ್ಛಿಸುವವರು 9483613834/9632013442/9019564947 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.
ಅಭಿಲಾಷ ತಾಮ್ಸೆ , ರಮೇಶ ಪ್ರೇಮ ಪೆಡ್ನೇಕರ್, ಪ್ರೀತೇಷ ವಾಲ್ಮೀಕಿ, ಕಿರಣ ಬಡಗೇರ, ಚಂದ್ರಕಾಂತ ನಾಗೊಳ್ಳಿ, ಸುಭಾಸ ನಾಯ್ಕೋಡಿ, ಪ್ರಜ್ವಕ ಕೊಳಂಬಕರ ರಾಜನ್ ಬಾನಾಬಳಿ ಗಿರಿಶ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.