ಮಂಗಳೂರು: ಗಾಂಜಾ ವ್ಯಸನಿಗಳ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ ಕರಾಟೆ ಮಾಸ್ಟರೊಬ್ಬರಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಕರಾಟೆ ಮಾಸ್ಟರ್ ಹರೀಶ್ ಗಾಣಿಗ (42) ಎಂಬವರಿಗೆ ಚೂರಿಯಿಂದ ಇರಿಯಲಾಗಿದೆ. ಹರೀಶ್ ಅವರ ಗ್ಯಾಸ್ ಆ್ಯಕ್ಸೆಸರೀಸ್ ಅಂಗಡಿಗೆ ಬಂದು ವಿಶಾಲ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಎದೆ ಹಾಗೂ ಕೈ ಭಾಗಕ್ಕೆ ಇರಿಯಲಾಗಿದ್ದು, ಗಂಭೀರ ಗಾಯಗಳಾಗಿವೆ.
ಹರೀಶ್ ಗಾಣಿಗ ಅವರು ಗಾಂಜಾ ವ್ಯಸನಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ದ್ವೇಷದಿಂದಾಗಿ ಗಂಭೀರವಾಗಿ ಗಾಯಗೊಳಿಸಲಾಗಿದೆ ಎನ್ನಲಾಗಿದೆ. ಗಾಯಾಳು ಹರೀಶ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.