ಜಿಲ್ಲೆ

ಕರೋಕೆ ಗಾಯನ ಸ್ಪರ್ಧೆ ಇಂದಿನಿಂದ

ಸಿಂಧನೂರು: ನಗರದ ಟೌನ್‌ಹಾಲ್‌ನಲ್ಲಿ ಶ್ರೀ ಗುರು ಪಂಡಿತ ಪುಟ್ಟರಾಜ ಸಾಂಸ್ಕೃತಿಕ ಜಾನಪದ ಕಲಾ ತಂಡ ಹಾಗೂ ಅಮರಸ್ವರ ಸಂಗಮ ಕರೋಕೆ ಸ್ಟುಡಿಯೋ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆ ಸಂಚಿಕೆ-7 ಅಂತಿಮ ಕಾರ್ಯಕ್ರಮ ಜು.6ರಂದು ಆರಂಭವಾಗಲಿದೆ ಎಂದು ತಂಡದ ಅಧ್ಯಕ್ಷ ಬಸವರಾಜ ಗಸ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು, ಕಾರ್ಯಕ್ರಮವನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನೇತ್ರತಜ್ಞ ಡಾ.ಚನ್ನನಗೌಡ ಪೊ.ಪಾ ವಹಿಸಲಿದ್ದಾರೆ.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಿದ್ದಾರೆಂದು ತಿಳಿಸಿದರು. ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ, ವೀರಭದ್ರಯ್ಯ ತಾತ, ಡೈಮಂಡ್ ಸುಷ್ಮಾ ಹಿರೇಮಠ, ಶಂಕರ ಕಾಟ್ವಾ, ವೀರೇಶ ಯರದಿಹಾಳ, ವೀರೇಶ ಕಂಬಳಿಮಠ, ಸೋನು ದೀಕ್ಷಿತ್, ಅಭಿಷೇಕ್ ಗಸ್ತಿ, ಆಕಾಶ ಹೊಸಮನಿ, ಲಕ್ಷ್ಮೀ ಹಿರೇಮಠ ಇದ್ದರು.