ಜಿಲ್ಲೆ

ಭಾಷಾ ಚಟುವಟಿಕೆಯಿಂದ ಕನ್ನಡ ಶ್ರೀಮಂತ

Avinash R

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಗಡಿನಾಡು ಕಾಸರಗೋಡಿನ ಕನ್ನಡ ಚಟುವಟಿಕೆ ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ ಎಂದು ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎನ್.ಅಶೋಕ್ ತಿಳಿಸಿದರು.

ಕಾಸರಗೋಡು ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಕೇರಳ ಘಟಕ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಸಹಯೋಗದಲ್ಲಿ ನಡೆದ ಕೇರಳ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಹರ್ಷಿತಾ ಪಿ.ಪೆರ್ಲ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಕುಸುಮಾ ದಂಪತಿ ಮುಖ್ಯ ಅತಿಥಿಯಾಗಿದ್ದರು. ಸಹ ಅಧ್ಯಕ್ಷೆ ಶಿವಾನಿ ಕೂಡ್ಲು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ನಗರಸಭಾ ಪ್ರತಿಪಕ್ಷ ಮುಖಂಡ ಪಿ.ರಮೇಶ್, ಧನಂಜಯ ಕುಂಬಳೆ, ವಿ.ಬಿ.ಕುಳಮರ್ವ, ವಿಶಾಲಾಕ್ಷ ಪುತ್ರಕಳ, ರಾಧಾಕೃಷ್ಣ ಉಳಿಯತ್ತಡ್ಕ, ಕೆ.ಸತೀಶ್ ಕೂಡ್ಲು, ರಮಶ್ ಎಂ.ಬಾಯಾರು, ಲವ ಕೆ.ಮೀಪುಗುರಿ, ರಾಮ ಪ್ರಸಾದ್, ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ.ಶಹೀದ್, ಡಿ.ಜಯರಾಂ ನೆಲ್ಲಿತ್ತಾಯ, ಕೀರ್ತಿಶೇಖರ್, ಪುರುಷೋತ್ತಮ ನಾಯ್ಕ ಕೆಸಿಎನ್, ಡಾ.ರಾಜೇಶ್ ರೈ, ಸುಭಾಷ್ ಪೆರ್ಲ, ವರಪ್ರಸಾದ್, ಗುರುಪ್ರಸಾದ್, ನಗರಸಭಾ ಮಾಜಿ ಸದಸ್ಯ ಶಂಕರ ಕೆ.ಮೊದಲಾದವರು ಉಪಸ್ಥಿತರಿದ್ದರು.

ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾವ್ಯಾಕುಶಲ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.

ಗಮನ ಸೆಳೆದ ಮೆರವಣಿಗೆ

ಶಾಲಿನಿ ಸತೀಶ್ ಶೆಟ್ಟಿ ಥಾಣೆ ಅವರಿಗೆ ಕರಾವಳಿ ಪ್ರತಿಭಾಶಾಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೂಡ್ಲು ಶಾಲೆ ವಠಾರದಿಂದ ಸಮ್ಮೇಳನಾಧ್ಯಕ್ಷರು, ಅತಿಥಿಗಳನ್ನೊಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ಸಮ್ಮೇಳನ ನಗರದವರೆಗೆ ನಡೆಯಿತು. ಸಮ್ಮೇಳನ ನಗರದಲ್ಲಿ ರಾಷ್ಟ್ರಧ್ವಜ, ಮಕ್ಕಳ ಸಾಹಿತ್ಯ ಪರಿಷತ್ ಧ್ವಜ ಹಾಗೂ ಕನ್ನಡ ಧ್ವಜಾರೋಹಣವನ್ನು ನಗರಸಭಾ ಸದಸ್ಯೆ ಶಾರದಾ ಜೆ.ಪಿ.ನಗರ, ಶಿವರಾಂ ಕಾಸರಗೋಡು ಹಾಗೂ ಸಿ.ಎನ್.ಅಶೋಕ್ ನಡೆಸಿದರು.

ವಿವಿಧ ಪ್ರದರ್ಶನಗಳು

ಪುಸ್ತಕ ಪ್ರದರ್ಶನ, ಕಲಾ ಪ್ರದರ್ಶನ, ತೆಂಕುತಿಟ್ಟಿನ ಯಕ್ಷಗಾನ ವೇಷಭೂಷಣಗಳ ಪ್ರದರ್ಶನ, ಕೃಷಿ-ಹಣ್ಣುಹಂಪಲು ಪ್ರದರ್ಶನ, ಗ್ರಾಮೀಣ ಆಹಾರಮೇಳ, ವೈದ್ಯಕೀಯ ತಪಾಸಣೆ ನಡೆಯಿತು. ‘ನಮ್ಮ ಕಾಸರಗೋಡು ನಮ್ಮ ಹೆಮ್ಮೆ’ ವರ್ಷಾಚರಣೆ ಅಂಗವಾಗಿ ಕನ್ನಡ ಗ್ರಾಮದಲ್ಲಿ 60 ಸಸಿ ನೆಡುವ ಕಾರ್ಯಕ್ರಮಕ್ಕೆ ಸಿ.ಎನ್.ಅಶೋಕ್ ಚಾಲನೆ ನೀಡಿದರು. ವಿದ್ಯಾರ್ಥಿ ಕವಿಗೋಷ್ಠಿ, ಸಣ್ಣ ಕಥಾಗೋಷ್ಠಿ, ಸಾಂಸ್ಕೃತಿಕ-ಕಲಾ ಕಾರ್ಯಕ್ರಮ ಜರುಗಿತು.