ಜಿಲ್ಲೆ

ಕಂಚರಕಾಳು ಸೇತುವೆ ಅಂತಿಮ ಹಂತಕ್ಕೆ

ಇಂದಿರಾ ಎನ್ ಕೆ

ಹೆಬ್ರಿ: ಕುಚ್ಚೂರು ಕಂಚರಕಾಳು ಸೇತುವೆಯ ಕಾಮಗಾರಿ ಅಂತಿಮಂತಕ್ಕೆ ತಲುಪಿದ್ದು ಇನ್ನು ಕೆಲವು ದಿನಗಳಲ್ಲಿ ವಾಹನಗಳ ಓಡಾಟಕ್ಕೆ ಮುಕ್ತವಾಗಲಿದೆ. ಕಾಮಗಾರಿ ನಡೆಯುತ್ತಿದ್ದರಿಂದ ಜಿಲ್ಲಾಧಿಕಾರಿಯವರು ಜುಲೈ 30ರ ತನಕ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧಿಸಿ ಆದೇಶ ಹೊರಡಿಸಿದ್ದರು. ಭಾರಿ ಮಳೆ ಇದ್ದಿದ್ದರಿಂದ ಕಾಮಗಾರಿಗೆ ತೊಡಕುಂಟಾಗಿ ವಿಳಂಬವಾಗಿತ್ತು. ಇದೀಗ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಶೀಘ್ರವೇ ರಸ್ತೆ ಸಂಚಾರಕ್ಕೆ ಅವಕಾಶ ದೊರೆಯಲಿದೆ. ಸೇತುವೆ ಸಮೀಪ ಬದಲಿ ರಸ್ತೆ ನಿರ್ಮಾಣಕ್ಕೆ ಪ್ರತಿಭಟನೆ ನಡೆಸಿ ಜನರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸೇತುವೆಯ ಕೆಲಸ ಸಂಪೂರ್ಣ ಮುಗಿದು ಸೈಡ್ ವಾಲ್‌ಗಳ ನಡುವೆ ಮಣ್ಣು ತುಂಬಲು ಬಾಕಿ ಇದೆ.