ಜಿಲ್ಲೆ

25, 26ರಂದು ಕಾಂಚನೋತ್ಸವ

Avinash R

ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್‌ನ 71ನೇ ವರ್ಷದ ‘ಕಾಂಚನೋತ್ಸವ-2025’, ಜ.25 ಮತ್ತು 26ರಂದು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ನಡೆಯಲಿದೆ. ಜ.25ರಂದು 10ರಿಂದ ಅಭಿಷೇಕ್ ಎನ್.ಎಸ್. ಮತ್ತು ದಿ ಕರ್ನಾಟಿಕ್ ಅಡ್ಡ ತಂಡದಿಂದ ನಾಮ ಸಂಕೀರ್ತನೆ, 10.30ರಿಂದ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಲಿದೆ.

ಸಂಜೆ 6 ಗಂಟೆಯಿಂದ ಸಂಗೀತ ಕಛೇರಿ ನಡೆಯಲಿದೆ. ಜ.26ರಂದು ಬೆಳಗ್ಗೆ 8.30ರಿಂದ ಕಾಂಚನ ಮನೆಯಿಂದ ಸಂಗೀತ ಶಾಲೆಯವರೆಗೆ ಸಂಗೀತ ಸಂತ ಶ್ರೀ ತ್ಯಾಗರಾಜರ ಕೃತಿಗಳ ಸಂಗೀತ ನಡಿಗೆ ಉಂಛವೃತ್ತಿ ನಡೆಯಲಿದೆ. ಬೆಳಗ್ಗೆ 10ರಿಂದ ಪಿಳ್ಳಾರಿ ಗೀತೆಗಳು ಮತ್ತು ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, 11.30ರಿಂದ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಲಿದೆ. ಸಂಜೆ 4 ಗಂಟೆಯಿಂದ ಸಂಗೀತ ಕಛೇರಿ ನಡೆಯಲಿದೆ.