ತಾಲೂಕು ಮಟ್ಟಕ್ಕೆ ಆಯ್ಕೆಯಾದ ಕನಕಗಿರಿ ತಾಲೂಕಿನ ಸಿರವಾರದ ಡಾ.ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳೊಂದಿಗೆ ಪ್ರಾಚಾರ್ಯ ಶೇಖಪ್ಪ ಅರಷಣಗಿ, ನಿಲಯ ಪಾಲಕ ಶರಣಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಪರಶುರಾಮ ಎ.ಕೆ., ಶಿಕ್ಷಕರಾದ ಝಾಕೀರ್ ಹುಸೇನ ನದಾಫ್, ಬಾಬರ್ ಪಾಷಾ, ಶೇಖ ಫಾರೂಕ್, ಪರಶುರಾಮ, ಕನಕರಾಯ ಡಗ್ಗಿ, ಸುಜಾತಾ ಬೇವೂರು, ಗಾಯತ್ರಿ ಹುಲಿಗೆಮ್ಮ ಡಗ್ಗಿ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಕನಕಗಿರಿ: ತಾಲೂಕಿನ ಕಲಕೇರಿಯಲ್ಲಿ ನಡೆದ ಕನಕಗಿರಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಿರವಾರ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ನಾನಾ ಸ್ಪರ್ಧೆಗಳಲ್ಲಿ ವಿಜೇತರಾಗಿ ಗಂಗಾವತಿ ತಾಲೂಕು ಮಟ್ಟಕ್ಕೆ ಇತ್ತೀಚೆಗೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್, 4*100 ಮೀ ಹಾಗೂ ರಿಲೇ 4*400 ಮೀ ರಿಲೇ-ಶಿವಲೀಲಾ ತಂಡ (ಪ್ರಥಮ), 100 ಮೀಟರ್ ಓಟದಲ್ಲಿ ಶಿವಲೀಲಾ (ಪ್ರಥಮ), ಜಾವೆಲಿನ್ ಥ್ರೋ ಬಿ.ಸುಶ್ಮಿತಾ (ದ್ವಿತೀಯ), 3000 ಮೀ ನಡಿಗೆ-ಅನ್ನಪೂರ್ಣಾ (ಪ್ರಥಮ), ತ್ರಿವಿಧ ಜಿಗಿತ ಶಿವಲೀಲಾ (ಪ್ರಥಮ) ಸ್ಥಾನ, 800 ಮೀ ಓಟ, ವೀಣಾ, (ಪ್ರಥಮ) ಸ್ಥಾನ ಪಡೆದಿದ್ದಾರೆ. ಇನ್ನು ಬಾಲಕರ ವಿಭಾಗದಲ್ಲಿ ಥ್ರೋಬಾಲ್ ವಿಷ್ಣು ಕಾಟಾಪುರ (ದ್ವಿತೀಯ) ಸ್ಥಾನ, 4*100 ಮೀ ರಿಲೇ ಹಾಗೂ 4*400 ಮೀ ರಿಲೇ(ಪ್ರಥಮ) ಛತ್ರಪತಿ ತಂಡ, 100 ಮೀ ಓಟ- ಮಂಜುನಾಥ (ಪ್ರಥಮ) 200 ಮೀ ಓಟ-ಆಂಜನೇಯ (ಪ್ರಥಮ), ಜಾವೆಲಿನ್ ಥ್ರೋ- ಸುದೀಪ್ (ಪ್ರಥಮ), ತ್ರಿವಿಧ ಜಿಗಿತ- ರಮೇಶ್ (ಪ್ರಥಮ), ಉದ್ದ ಜಿಗಿತ- ರಮೇಶ್ (ದ್ವಿತೀಯ), ಗುಂಡು ಎಸೆತ- ಸುದೀಪ್ (ಪ್ರಥಮ), 800 ಮೀ ಓಟ, ಹರೀಶ್ (ಪ್ರಥಮ), ತಟ್ಟೆ ಎಸೆತ, ಪ್ರದೀಪ್ (ಪ್ರಥಮ), ಹ್ಯಾಮರ್ ಥ್ರೋ, ಗಣೇಶ್ (ದ್ವಿತೀಯ) ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಪ್ರಾಚಾರ್ಯ ಶೇಖಪ್ಪ ಅರಷಣಗಿ ತಿಳಿಸಿದ್ದಾರೆ.