ಕನಕಾಚಲಪತಿ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಎಣಿಕೆ ಮಾಡುತ್ತಿರುವ ಅಧಿಕಾರಿಗಳು, ಭಕ್ತರು, ಆಡಳಿತ ಮಂಡಳಿ ಸದಸ್ಯರು. ಕಾರ್ಯನಿರ್ವಣಾಧಿಕಾರಿ ಸಿದ್ಧಲಿಂಗಯ್ಯಸ್ವಾಮಿ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ಕೀರ್ತಿ ಸೋನಿ, ವೀರೇಶ್ ತೆಗ್ಗಿನಮನಿ ಇತರರಿದ್ದರು. 
ಜಿಲ್ಲೆ

ಕನಕಾಚಲಪತಿ ಹುಂಡಿಯಲ್ಲಿ 5 ಲಕ್ಷ ರೂ. ಸಂಗ್ರಹ

ಕನಕಗಿರಿ: ಇಲ್ಲಿನ ಐತಿಹಾಸಿಕ ಶ್ರೀ ಕನಕಾಚಲ ದೇವಸ್ಥಾನದ ಹುಂಡಿಯನ್ನು ಗ್ರೇಡ್ 2 ತಹಸೀಲ್ದಾರ ಮಹಾಂತಗೌಡ ನೇತೃತ್ವದಲ್ಲಿ ಬುಧವಾರ ಎಣಿಕೆ ಮಾಡಲಾಗಿದ್ದು, ಮೂರು ತಿಂಗಳಲ್ಲಿ 5,02,520 ರೂ. ಸಂಗ್ರಹಗೊಂಡಿದೆ.

ದೇವಸ್ಥಾನದಲ್ಲಿದ್ದ ಒಟ್ಟು 6 ಹುಂಡಿಗಳನ್ನು ತಹಸೀಲ್ದಾರರ ನೇತೃತ್ವದಲ್ಲಿ ತೆರೆದು ಭಕ್ತರ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು. ಕಾಣಿಕೆ ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ದೇವಸ್ಥಾನದ ಖಾತೆಗೆ ಜಮಾಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಕಾರ್ಯನಿರ್ವಣಾಧಿಕಾರಿ ಸಿದ್ಧಲಿಂಗಯ್ಯಸ್ವಾಮಿ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ಕೀರ್ತಿ ಸೋನಿ, ವೀರೇಶ್ ತೆಗ್ಗಿನಮನಿ, ವೆಂಕಟೇಶ ಸೌದ್ರಿ, ಕಂಟೆಪ್ಪ ತರಲಕಟ್ಟಿ, ನಾಗಪ್ಪ ಕೊರಡ್ಡಿ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.