ಕಾನಹೊಸಹಳ್ಳಿಯಲ್ಲಿ ಸಾಂಕ್ರಾಮಿಕ ರೋಗಗಳ ತಡೆ ಕುರಿತು ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಮಲೇರಿಯಾ ಅಧಿಕಾರಿ ಕಮಲಮ್ಮ ಉದ್ಘಾಟಿಸಿದರು. ಪ್ರಮುಖರಾದ ಕೆ.ಎಂ.ಶಶಿಧರ್, ನಂದಾ, ಡಾ.ವಿಶ್ವನಾಥ, ರಾಘವರೆಡ್ಡಿ, ಸೋಮಶೇಖರ್, ಲತಾ ಇತರರಿದ್ದರು. 
ಜಿಲ್ಲೆ

ಸಾಂಕ್ರಾಮಿಕ ರೋಗಗಳ ತಡೆಗೆ ಜಾಗೃತಿ ಮೂಡಿಸಿ

ನರೇಶ್ ಕುಮಾರ್

ಕಾನಹೊಸಹಳ್ಳಿ: ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಈ ಕುರಿತು ಆಶಾ ಕಾರ್ಯಕರ್ತೆಯರು ಜನಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಕಮಲಮ್ಮ ಹೇಳಿದರು.

ಪಟ್ಟಣದ ಕೆಎಂಎಸ್ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಶನಿವಾರ ಸಾಂಕ್ರಾಮಿಕ ರೋಗ ತಡೆ ಕುರಿತು ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಗ್ರಾಮದ ಪ್ರತಿಮನೆಗೂ ಭೇಟಿ ನೀಡಿ ಸೊಳ್ಳೆಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಬೇಕು. ಗುಂಪು ಸಭೆಗಳನ್ನು ನಡೆಸಿ ಆರೋಗ್ಯ ಶಿಕ್ಷಣ ನೀಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.

ಕಾಲೇಜಿನ ಮುಖ್ಯಸ್ಥ ಕೆ.ಎಂ.ಶಶಿಧರ್, ಸೂಕ್ಷ್ಮ ಕೀಟಾಣು ತಜ್ಞ ನಂದಾ, ಸ್ಥಳೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿಶ್ವನಾಥ, ಸಿಬ್ಬಂದಿ ರಾಘವರೆಡ್ಡಿ, ಸೋಮಶೇಖರ್, ಲತಾ, ಬಸವರಾಜ್, ಕೊಟ್ರೇಶ ಇತರರಿದ್ದರು.