ಕಂಪ್ಲಿಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ಪ್ರದರ್ಶನಗೊಂಡ ನಾನ್ಯಾರು ನಾಟಕದ ದೃಶ್ಯ.  
ಜಿಲ್ಲೆ

ಸಂವಿಧಾನದ ಆಶಯ ಈಡೇರಲಿ, ವಸತಿ ನಿಲಯದ ಮೇಲ್ವಿಚಾರಕ ಕೆ.ವಿರೂಪಾಕ್ಷಪ್ಪ ಹೇಳಿಕೆ

ಕಂಪ್ಲಿ: ಸಂವಿಧಾನದ ಆಶಯ ಈಡೇರಿಸಲು ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕ ಕೆ.ವಿರೂಪಾಕ್ಷಪ್ಪ ಹೇಳಿದರು.

ಇಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಮಾವಿನಹಳ್ಳಿಯ ಶ್ರೀಸಿದ್ಧೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಹಾಗೂ ಸಂಜೀವರಾಯನಕೋಟೆಯ ರಂಗಕಹಳೆ ಸಾಂಸ್ಕೃತಿಕ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ಯಶಸ್ವಿಗೊಳ್ಳಲು ಸಂವಿಧಾನದ ಆಶಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಂವಿಧಾನ ಅರಿತು ಪಾಲಿಸಿದಲ್ಲಿ ಉತ್ತಮ ನಾಗರಿಕನಾಗಿ ಹೊರಹೊಮ್ಮುತ್ತಾನೆ ಎಂದರು.

ಬಿ.ದೊಡ್ಡಬಸಪ್ಪ ತಂಡದವರು ರಂಗಗೀತೆಗಳನ್ನು ಹಾಡಿದರು. ಚಂದ್ರಶೇಖರ್ ತಂಡದಿಂದ ಪ್ರದರ್ಶನಗೊಂಡ ನಾನ್ಯಾರು ನಾಟಕದಲ್ಲಿ ಸರಳಾ, ಪ್ರಸಾದ್, ಬಾಲು, ಅಕ್ಷತಾ, ಪಲ್ಲವಿ, ಗಿರೀಶ್, ಗಗನ್, ಮಲ್ಲಿಕಾರ್ಜುನ, ಸುರೇಶ್, ವಸಂತ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದರು. ಶಿರಸ್ತೇದಾರ್ ಜಿ.ಪಂಪಾಪತಿ, ಪ್ರಥಮ ದರ್ಜೆ ಸಹಾಯಕ ಮೌನೇಶ್, ಕಾರಿಗನೂರು ರಂಗಕಲಾವಿದ ಸೋಮಶೇಖರ್, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಯೋಗ ಉಪನ್ಯಾಸಕ ಡಿ.ಮಹೇಶಬಾಬು, ಟ್ರಸ್ಟ್ ಕಾರ್ಯದರ್ಶಿ ಕುರುಬರ ಹೇಮೇಶ್ವರ, ರಂಗಕಹಳೆ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಕೆ.ನಾಗರಾಜ, ವಸತಿ ನಿಲಯದ ಮೇಲ್ವಿಚಾರಿಕಿ ಕೆ.ಕವಿತಾ ಇತರರಿದ್ದರು.