ಕಂಪ್ಲಿಯ ತಹಸಿಲ್ ಕಚೇರಿಯಲ್ಲಿ ನಡೆದ ಜೀತಪದ್ಧತಿ ನಿರ್ಮೂಲನಾ ದಿನಾಚರಣೆ ನಿಮಿತ್ತ ತಹಸೀಲ್ದಾರ್ ಶಿವರಾಜ ಪ್ರತಿಜ್ಞಾವಿಧಿ ಬೋಧಿಸಿದರು. 
ಜಿಲ್ಲೆ

ಕಂಪ್ಲಿಗೆ 14ರಂದು ಸಂವಿಧಾನ ಜಾಗೃತಿ ಜಾಥಾ ಆಗಮನ

ಕಂಪ್ಲಿ: ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂವಿಧಾನ ಜಾಗೃತಿ ಜಾಥಾದ ಪೂರ್ವಭಾವಿ ಸಭೆ ಹಾಗೂ ಜೀತಪದ್ಧತಿ ನಿರ್ಮೂಲನಾ ದಿನ ಆಚರಣೆ ಮಾಡಲಾಯಿತು.

ತಹಸೀಲ್ದಾರ್ ಶಿವರಾಜ ಮಾತನಾಡಿ, ಫೆ.14ರ ಬೆಳಗ್ಗೆ ಎಮ್ಮಿಗನೂರಿನಲ್ಲಿ ಜಾಥಾ ಸ್ವಾಗತಿಸಲಾಗುವುದು. ನೆಲ್ಲೂಡಿ, ಕೊಟ್ಟಾಲ್ ಮೂಲಕ ನಂ.3 ಸಣಾಪುರಕ್ಕೆ ತೆರಳಿ, ಅಲ್ಲಿಂದ ಕಂಪ್ಲಿಗೆ ಆಗಮಿಸಲಿದೆ. ಪಟ್ಟಣದ ಮುಖ್ಯರಸ್ತೆಗಳಲ್ಲಿ ಜಾಥಾ ಮೆರವಣಿಗೆ ನಡೆಯಲಿದೆ. ಎಸ್‌ಎನ್ ಪೇಟೆ ಶಾಲಾವರಣದಲ್ಲಿ ಕಾರ್ಯಕ್ರಮ ನಡೆಯಲಿವೆ.

ಫೆ.15ರಂದು ನಂ.10ಮುದ್ದಾಪುರ, ರಾಮಸಾಗರ, ದೇವಸಮುದ್ರದಲ್ಲಿ ಸಂಚರಿಸಿ, ಮೆಟ್ರಿಯಲ್ಲಿ ಕಾರ್ಯಕ್ರಮ ನಡೆಯಲಿವೆ. ಫೆ.16ರಂದು ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ದೇವಲಾಪುರದಿಂದ ಕುಡತಿನಿಗೆ ತೆರಳಲಿದೆ ಎಂದರು.

ತಾಪಂ ಇಒ ಆರ್.ಕೆ.ಶ್ರೀಕುಮಾರ್, ಮುಖ್ಯಾಧಿಕಾರಿ ಕೆ.ದುರುಗಣ್ಣ, ಡಿಟಿ ಬಿ.ರವೀಂದ್ರಕುಮಾರ್, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಡಾ.ಎ.ಸಿ.ದಾನಪ್ಪ, ಸಿ.ಆರ್.ಹನುಮಂತ, ಜಿ.ರಾಮಣ್ಣ, ಬಿ.ಸಿದ್ದಪ್ಪ, ಕೆ.ಲಕ್ಷ್ಮಣ ಇತರರಿದ್ದರು.