More

    ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ತಿಳಿಯಿರಿ

    ಕಲಘಟಗಿ: ಭಾರತೀಯರೆಲ್ಲರೂ ಸಮಾನರೆಂಬ ಭ್ರಾತೃತ್ವ ಭಾವ ಬೆಳೆಸುವುದು ಹಾಗೂ ಸ್ತ್ರೀಯರಿಗೆ ಅಗೌರವ ಉಂಟಾಗುವಂಥ ಪದ್ಧತಿಗಳನ್ನು ನಿಮೂಲನೆ ಮಾಡುವ ಸದುದ್ದೇಶದಿಂದ ಜಗಜ್ಯೋತಿ ಬಸವಣ್ಣನವರ ವಚನಗಳ ಹಾದಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಎಂದು ಉಪನ್ಯಾಸಕ ಬಸಲಿಂಗಪ್ಪ ಅರವಳದ ಹೇಳಿದರು.

    75ನೇ ಸಂವಿಧಾನ ದಿನಾಚರಣೆ ಅಂಗವಾಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಮತ್ತು ಸ್ತಬ್ಧ ಚಿತ್ರಗಳ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಂವಿಧಾನದ ಮಹತ್ವ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಜೆ. ಯೋಗಪ್ಪನವರ ಮಾತನಾಡಿ, 12ನೇ ಶತಮಾನದಿಂದ ನಮ್ಮ ನಾಡಿನಲ್ಲಿ ಆಗುತ್ತಿರುವ ವರ್ಣ ಪದ್ಧತಿಗಳ ಶೋಷಣೆ ತಡೆಗಟ್ಟಲು ಬಸವಣ್ಣನವರು ಅಲ್ಲಮ ಪ್ರಭುಗಳ ಕಲ್ಯಾಣದಲ್ಲಿ ವಚನಗಳನ್ನು ಸಾರಿದರು. ಆಗಲೂ ಅವುಗಳಿಗೆ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಅವುಗಳನ್ನೇ ಜಾರಿಗೆ ತಂದು ದೇಶದಲ್ಲಿ ವರ್ಣಬೇಧವನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ ಎಂದರು.

    ಇದಕ್ಕೂ ಮುನ್ನ ತಾಲೂಕಿನ ಮಿಶ್ರಿಕೋಟಿ, ಸೂರಶೆಟ್ಟಿಕೊಪ್ಪ ಗ್ರಾಮಗಳಲ್ಲಿ ಭಾರತೀಯ ಸಂವಿಧಾನ, ಜಗಜ್ಯೋತಿ ಬಸವಣ್ಣನವರು ಹಾಗೂ ಬಿ.ಆರ್. ಅಂಬೇಡ್ಕರ್ ಅವರ ಸ್ತಬ್ಧ ಚಿತ್ರಗಳನ್ನು ಗ್ರಾಮಸ್ಥರು, ಪೂರ್ಣಕುಂಭ ಹೊತ್ತ ಮಹಿಳೆಯರು ವಿವಿಧ ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.

    ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಪುರದಣ್ಣವರ, ಉಪಾಧ್ಯಕ್ಷ ಸಿದ್ದಪ್ಪ ಅಕ್ಕಿ, ಎಸ್​ಡಿಎಂಸಿ ಅಧ್ಯಕ್ಷ ಮಂಜುನಾಥ ಅಕ್ಕಿ, ಬಸವರಾಜ ಸಣ್ಣಪೂಜಾರ, ರಾಜೇಸಾಬ್ ಸಣ್ಣಮನಿ, ಬಸವರಾಜ ವಾಲ್ಮೀಕಿ, ಗಂಗಾಧರ ಕಾಗಿ, ಹನುಮಂತ ಹರಿಜನ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts