ಶೇ.1 ಒಳಮೀಸಲಾತಿಗೆ ಆಗ್ರಹಿಸಿ ದೇವಲಾಪುರ ಗ್ರಾಮದಲ್ಲಿ ಅಖಿಲ ಕರ್ನಾಟಕ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದಿಂದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ರವಾನಿಸುವ ಮೂಲಕ ಅಂಚೆ ಚಳವಳಿ ನಡೆಸಲಾಯಿತು. ಸಂಘದ ರಾಜ್ಯ ಸಮಿತಿ ಕೋಶಾಧ್ಯಕ್ಷ ಚನ್ನದಾಸರ ಗಿರೀಶ್, ಪ್ರಮುಖರಾದ ಚನ್ನದಾಸರ ಲೋಕೇಶ್, ಚನ್ನದಾಸರ ಶಿವಣ್ಣ, ಯಲ್ಲಪ್ಪ, ಶಿವಪ್ಪ ಇತರರಿದ್ದರು. 
ಜಿಲ್ಲೆ

ಅಲೆಮಾರಿಗಳಿಗೆ ಶೇ.1 ಪ್ರತ್ಯೇಕ ಮೀಸಲು ನೀಡಲಿ

ಕಂಪ್ಲಿ: ಅಲೆಮಾರಿ ಸಮುದಾಯಗಳಿಗೆ ಶೇ.1 ಮೀಸಲಿಗೆ ಆಗ್ರಹಿಸಿ ಅಖಿಲ ಕರ್ನಾಟಕ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿಗೆ ಪತ್ರ ರವಾನಿಸುವ ಮೂಲಕ ದೇವಲಾಪುರ ಗ್ರಾಮದಲ್ಲಿ ಭಾನುವಾರ ಅಂಚೆಪತ್ರ ಚಳವಳಿ ನಡೆಸಿತು.

ಡಾ.ನಾಗಮೋಹನದಾಸ್ ಆಯೋಗದ ವರದಿ ಶಿಫಾರಸ್ಸಿನಂತೆ ರಾಜ್ಯದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತಿಸೂಕ್ಷ್ಮ 59 ಜಾತಿಗಳಿಗೆ ಶೇ.1 ಪ್ರತ್ಯೇಕ ಮೀಸಲಾತಿ ಕೊಡಬೇಕು. ಅಲೆಮಾರಿ ಸಮುದಾಯಗಳು ರಾಜಕೀಯ ಸ್ಥಾನಮಾನ, ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಶೇ.5 ಮೀಸಲಿನ ಪ್ರಬಲ ಜಾತಿಗಳೊಂದಿಗೆ ಅಲೆಮಾರಿಗಳನ್ನು ಸೇರಿಸಿದ್ದು ಅವೈಜ್ಞಾನಿಕವಾಗಿದ್ದು, ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಅಲೆಮಾರಿಗಳಿಗೆ ಪ್ರತ್ಯೇಕ ಶೇ.1 ಮೀಸಲು ನೀಡುವಂತೆ ಒತ್ತಾಯಿಸಲಾಯಿತು.

ಸಂಘದ ರಾಜ್ಯ ಸಮಿತಿ ಕೋಶಾಧ್ಯಕ್ಷ ಚನ್ನದಾಸರ ಗಿರೀಶ್, ಪ್ರಮುಖರಾದ ಚನ್ನದಾಸರ ಲೋಕೇಶ್, ಚನ್ನದಾಸರ ಶಿವಣ್ಣ, ಯಲ್ಲಪ್ಪ, ಶಿವಪ್ಪ, ಅಂಜಿನಪ್ಪ, ಮಹೇಶ್, ಗಣೇಶ್, ಹನುಮಂತಪ್ಪ, ಕೊಲ್ಲಾಪುರಮ್ಮ, ಪಟ್ಟಮಾರೆಕ್ಕ, ಹನುಮಕ್ಕ ಸೇರಿ ಇತರರಿದ್ದರು.