ಜಿಲ್ಲೆ

ಭಗವಂತನ ಸ್ಮರಿಸಿದರೆ ಸಂಕಷ್ಟಗಳು ದೂರ

ಕಂಪ್ಲಿ: ಶ್ರದ್ಧೆ-ಭಕ್ತಿಯಿಂದ ಭಗವಂತನ ಸ್ಮರಿಸಿದಲ್ಲಿ ಸಂಕಷ್ಟಗಳಿಂದ ಪಾರಾಗಬಹುದು ಎಂದು ಇಲ್ಲಿನ ಶ್ರೀಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷೆ ಪೂರ್ಣಿಮಾ ರಾಜೇಂದ್ರ ಆಚಾರ್ಯ ಜೋಶಿ ಹೇಳಿದರು.

ಅಧಿಕ ಮಾಸ ನಿಮಿತ್ತ ಇಲ್ಲಿನ ಕೆಎಚ್‌ಬಿ ಕಾಲನಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೋಕ ಕಲ್ಯಾಣಾರ್ಥ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕತೆಯ ಸೋಂಕಿಗೆ ಒಳಗಾಗಿ ಧಾರ್ಮಿಕ, ಆಧ್ಯಾತ್ಮಿಕ ಆಚಾರ, ವಿಚಾರ, ಸಂಸ್ಕಾರಗಳಿಂದ ವಿಮುಖರಾಗಬಾರದು. ಮಕ್ಕಳಿಗೆ ಭಜನೆ, ದೇವರ ಸ್ತ್ರೋತ್ರ, ನಾಮಾವಳಿ ಪಠಣ, ದೇವರ ಹಾಡುಗಾರಿಕೆ ಕುರಿತು ಅರಿವು ಮೂಡಿಸಬೇಕು ಎಂದರು.

ಭಜನಾ ಮಂಡಳಿ ಉಪಾಧ್ಯಕ್ಷೆ ಪರಿಮಳ ವಾಜೇಂದ್ರ ಜೋಶಿ, ಸದಸ್ಯ ವಿಜಯಲಕ್ಷ್ಮೀ ಪ್ರಕಾಶ್ ವೈದ್ಯ ಇತರರಿದ್ದರು.
ಅಧಿಕ ಮಾಸ ನಿಮತ್ತ ಕಂಪ್ಲಿಯ ಕೆಎಚ್‌ಬಿ ಕಾಲನಿಯಲ್ಲಿಶ್ರೀಸತ್ಯನಾರಾಯಣ ಭಜನಾ ಮಂಡಳಿಯಿಂದ ಭಜನೆ ಜರುಗಿತು. ಭಜನಾ ಮಂಡಳಿ ಅಧ್ಯಕ್ಷೆ ಪೂರ್ಣಿಮಾ ರಾಜೇಂದ್ರ ಆಚಾರ್ಯ ಜೋಶಿ, ಪರಿಮಳ ವಾಜೇಂದ್ರ ಜೋಶಿ, ವಿಜಯಲಕ್ಷ್ಮೀ ಪ್ರಕಾಶ್ ವೈದ್ಯ ಇತರರಿದ್ದರು.