ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಅರ್ಜಿದಾರರಿಗೆ ತಹಸೀಲ್ದಾರ್ ಗೌಸಿಯಾಬೇಗಂ ಫಾರ್ಮ್ ನಂ. 2 ವಿತರಿಸಿದರು. ಶಿರಸ್ತೇದಾರ್ ಜಿ.ಪಂಪಾಪತಿ ಇದ್ದರು. 
ಜಿಲ್ಲೆ

ಇನಾಮುಮುಕ್ತ ಗ್ರಾಮಕ್ಕಾಗಿ ಫಾರ್ಮ್ 2 ವಿತರಣೆ

ಕಂಪ್ಲಿ, ಇನಾಮುಮುಕ್ತ ಗ್ರಾಮ, ತಹಸಿಲ್ ಕಚೇರಿ, ಫಾರ್ಮ್ 2, Kampli, Inamumukta Village, Tehsil Office, Form 2,

ಕಂಪ್ಲಿ: ಇನಾಮುಮುಕ್ತ ಗ್ರಾಮಗಳನ್ನಾಗಿಸಲು ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ಅರ್ಜಿದಾರರಿಗೆ ಫಾರ್ಮ್ 2 ವಿತರಿಸುವ ಕಾರ್ಯಕ್ರಮ ನಡೆಯಿತು.

ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ, 1977ರಲ್ಲಿ ಕೆಲವು ಇನಾಮು ಅರ್ಜಿಗಳನ್ನು ಪರಿಶೀಲಿಸಿ ಪಟ್ಟಾಕ್ಕಾಗಿ ಫಾರ್ಮ್ ನಂ.2 ವಿತರಿಸಲಾಗಿತ್ತು. ಇದೀಗ ಮತ್ತೆ ಫಾರ್ಮ್ ನಂ.2 ವಿತರಿಸಲು ಸರ್ಕಾರ ಅವಕಾಶ ನೀಡಿದ್ದರಿಂದ, ಪರಿಶೀಲಿಸಿ, ಮರು ಮಂಜೂರಾತಿಗೆ 64 ಅರ್ಜಿದಾರರ ಅರ್ಜಿಗಳನ್ನು ಪರಿಶೀಲಿಸಿ ಫಾರ್ಮ್ ನಂ.2 ನೀಡಲಾಗುತ್ತಿದೆ.

ಫಾರ್ಮ್ 2 ವಿತರಣೆ ನಂತರ ಪಹಣಿ ಕಲಂ 6ರಲ್ಲಿ ಇನಾಮು ತೆಗೆದು ಪಟ್ಟಾ ಎಂದು ನಮೂದಿಸಲು ಸಹಾಯಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಕಳೆದ ತಿಂಗಳು 50 ಫಾರ್ಮ್ ನಂ.2 ಅರ್ಜಿ ವಿಲೇವಾರಿ ಮಾಡಲಾಗಿದೆ. ಉಳಿದವುಗಳನ್ನು ಪರಿಶೀಲಿಸಿ ಹಂತ, ಹಂತವಾಗಿ ವಿತರಿಸಲಾಗುವುದು ಎಂದರು.

ಶಿರಸ್ತೇದಾರ್ ಜಿ.ಪಂಪಾಪತಿ, ವಿಷಯ ನಿರ್ವಾಹಕ ಗುರುಸಿದ್ದೇಶ್, ವಿಎಗಳಾದ ಮಂಜುನಾಥ, ಶಿವರುದ್ರಯ್ಯ, ಲಕ್ಷ್ಮಣನಾಯ್ಕ, ಅಬ್ದುಲ್‌ರಬ್ ಇತರರಿದ್ದರು.