ದೇವಸಮುದ್ರ ಗ್ರಾಮದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಮಕ್ಕಳ ಹಕ್ಕುಗಳ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು. ಗ್ರಾಪಂ ಅಧ್ಯಕ್ಷ ನಾಯ್ಕರ ಮಾಯಮ್ಮ, ಉಪಾಧ್ಯಕ್ಷೆ ನಿರ್ಮಲಾ, ಪಿಡಿಒ ಸಾವಿತ್ರಿ ಗೌರೋಜಿ ಇತರರಿದ್ದಾರೆ. 
ಜಿಲ್ಲೆ

ಹಗಲು ಹೊತ್ತಿನಲ್ಲೂ ಉರಿವ ಬೀದಿದೀಪಗಳು

ನರೇಶ್ ಕುಮಾರ್

ಕಂಪ್ಲಿ: ದೇವಸಮುದ್ರ ಗ್ರಾಪಂ ಕಚೇರಿಯಲ್ಲಿ ಬುಧವಾರ ಅಧ್ಯಕ್ಷೆ ನಾಯ್ಕರ ಮಾಯಮ್ಮ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.

ಹಗಲಿನಲ್ಲೂ ಬೀದಿದೀಪಗಳು ಉರಿಯುತ್ತಿದ್ದು, ಆರಿಸಲು ಸೂಚಿಸಬೇಕು. ಶಿಥಿಲಗೊಂಡ ವಿದ್ಯುತ್ ಕಂಬಗಳನ್ನು ಬದಲಿಸಬೇಕು. ಎಲ್ಲ ಇಲಾಖಾಧಿಕಾರಿಗಳು ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ತಾಕೀತು ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸಭೆಗೆ ಗೈರಾದವರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಪಿಡಿಒ ಸಾವಿತ್ರಿ ಗೌರೋಜಿ ತಿಳಿಸಿದರು.
ತಾಲೂಕುಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲವೇ ಇಲಾಖೆಯ ಪ್ರತಿನಿಧಿಗಳನ್ನಾದರೂ ಕಳುಹಿಸಬೇಕು. ಮಾದರಿ ನಮೂನೆಯಲ್ಲಿ ಮಾಹಿತಿ ಭರ್ತಿಮಾಡಿ ನೀಡಬೇಕು. ಕೆಡಿಪಿ ಸಭೆಯಲ್ಲಿ ಪ್ರಮುಖ ವಿಷಯಗಳು ಚರ್ಚೆಯಾಗಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಎಚ್.ಸಿ.ರಾಘವೇಂದ್ರ ಸೂಚಿಸಿದರು.

ಉಪಾಧ್ಯಕ್ಷೆ ಉಪ್ಪಾರ ನಿರ್ಮಲಾ, ಕಾರ್ಯದರ್ಶಿ ಕುರಿ ಹೊನ್ನೂರಸ್ವಾಮಿ, ಜೆಸ್ಕಾಂ ಅಧಿಕಾರಿ ಮಹಾಂತೇಶ್, ಮಹಿಳಾ ಮೇಲ್ವಿಚಾರಕಿ ರೇಣುಕಾ, ಆರೋಗ್ಯ ನಿರೀಕ್ಷಣಾಧಿಕಾರಿ ಜಗನ್ನಾಥ ಇತರರಿದ್ದರು.