ಗ್ರಾಪಂನಲ್ಲಿ ಕೆಡಿಪಿ ಸಭೆ ಆಯೋಜಿಸಿರುವುದು ಶ್ಲಾಘನೀಯ

web5
ಶಿಂದೋಗಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು. ಡಿ.ಡಿ.ಟೋಪೋಜಿ, ಯಶವಂತಕುಮಾರ, ರಮೇಶ ಬೆಡಸೂರ ಇತರರು ಇದ್ದರು.
Published on

ಮುನವಳ್ಳಿ: ಗ್ರಾಪಂ ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ಶಿಂದೋಗಿ ಗ್ರಾಪಂ ಅಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಮತ್ತು ಅಲ್ಲಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವಲ್ಲಿ ಕೆಡಿಪಿ ಸಭೆ ಸಹಕಾರಿಯಾಗುತ್ತದೆ. ಇಂತಹ ಸಭೆಗಳು ಎಲ್ಲ ಗ್ರಾಪಂಗಳಲ್ಲಿ ಜರುಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಂದೋಗಿ ಗ್ರಾಪಂ ಅಧ್ಯಕ್ಷ ಡಿ.ಡಿ.ಟೋಪೋಜಿ ಮಾತನಾಡಿ, ಯಕ್ಕೇರಿ ಗ್ರಾಮದ ಹದ್ದಿಯಲ್ಲಿ ಬರುವ ಕಂದಾಯ ಇಲಾಖೆಯ ಸುಮಾರು 60 ರಿಂದ 70 ಎಕರೆ ಸರ್ಕಾರಿ ಗಾಯರಾಣ ಜಾಗ ಅತಿಕ್ರಮಣವಾಗಿದೆ. ಅಧಿಕಾರಿಗಳು ಪರಿಶೀಲಿಸಿ ವಶಕ್ಕೆ ಪಡೆಯಬೇಕು ಎಂದರು. ತಾಪಂ ಇಒ ಯಶವಂತಕುಮಾರ ಮಾತನಾಡಿ, ಮೊಟ್ಟಮೊದಲ ಬಾರಿಗೆ ಗ್ರಾಪಂ ಮಟ್ಟದಲ್ಲಿ ಕೆಡಿಪಿ ಸಭೆ ಜರುಗುತ್ತಿರುವುದು ಸಂತೋಷ ತಂದಿದೆ ಎಂದರು.\

ಗ್ರಾಪಂ ಉಪಾಧ್ಯಕ್ಷೆ ಶಕುಂತಲಾ ಬಂಡಿವಡ್ಡರ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ದಸ್ತಿ, ಈಶ್ವರ ಯಕ್ಕೇರಿ, ಕಲ್ಲಪ್ಪ ಕುರುಬಗಟ್ಟಿ, ಮುಶೆಪ್ಪ ಮುಶೆನ್ನವರ, ಫಕೀರಪ್ಪ ಮಾದರ, ಮಾಯವ್ವ ಟೋಪೋಜಿ, ಚನ್ನವ್ವ ಗೋಕಾಂಚಿ, ಸಿದ್ದವ್ವ ಟೋಪೋಜಿ, ನಿಂಗಪ್ಪ ಟೋಪೋಜಿ, ರುದ್ರವ್ವ ಮಾದರ, ಹೂವಕ್ಕ ತಳವಾರ, ಗುಡುಮಾ ಶೆರೆಗಾರ, ವಲಯ ಅಭಿಯಂತ ಎಸ್.ಕೆ. ಚವ್ಹಾಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಆರ್.ಕುಲಕರ್ಣಿ, ತೋಟಗಾರಿಕೆ ಇಲಾಖೆಯ ಸೋಮಶೇಖರ ಎಚ್., ಸಹಾಯಕ ಅಭಿಯಂತ ಬಸವರಾಜ ಐಯ್ಯನಗೌಡರ, ಕೃಷಿ ಇಲಾಖೆ ಅಧಿಕಾರಿ ಪ್ರಕಾಶ ಪಾಟೀಲ, ಸಿಡಿಪಿಒ ಸುನೀತಾ ಪಾಟೀಲ, ಮುಖ್ಯಶಿಕ್ಷಕ ಬಿ.ಪಿ.ಅಂಗಡಿ, ಪಿಡಿಒ ರಮೇಶ ಬೆಡಸೂರ, ಶಿಕ್ಷಕ ವಿಠ್ಠಲ ದೇವರಡ್ಡಿ, ರಾಜೇಶ್ವರಿ ಭೋವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net