ಹೆಬ್ರಿ: ಚಾರ ಮೇಲ್ಬೇಟ್ಟು ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರಡಿಯ ವಾರ್ಷಿಕ ನೇಮೋತ್ಸವಕ್ಕೆ ಭಾನುವಾರ ಕಂಬದ ಮುಹೂರ್ತ ನಡೆಯಿತು. ಏ.8ರಂದು ಅನ್ನಸಂತರ್ಪಣೆ, ಸಂಜೆ ಬೈದರ್ಕಳ ಸರ್ಸಲೆ ಹೊರಡುವುದು, ರಾತ್ರಿ ಶಿವರಾಯ ಕೋಲ, ಬೈದರ್ಕಳ ದರ್ಶನ, ಬೈದರ್ಕಳ ಮತ್ತು ಧೂಮಾವತಿಯ ಮುಖಾಮುಖಿ ಭೇಟಿ ನಡೆಯಲಿದೆ. 9ರಂದು ಸಂಜೆ ಮಯಾಂದಲಮ್ಮ ನೇಮ, ಜುಮಾದಿ ನೇಮ ನಡೆಯಲಿದೆ. 11ರಂದು ಶಿವರಾಯ ಮಾರಿ ಹಾಗೂ 22ರಂದು ಗ್ರಾಮದ ದೊಡ್ಡ ಮಾರಿ ನಡೆಯಲಿದೆ ಎಂದು ಚಾರ ಮೇಲ್ಬೆಟ್ಟು ಕ್ಷೇತ್ರದ ಪ್ರಕಟಣೆ ತಿಳಿಸಿದೆ.