ಕುರುಗೋಡು ತಹಸಿಲ್ ಕಚೇರಿ ಆವರಣದಲ್ಲಿ ಕಕ ಉತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಮಾತನಾಡಿದರು. ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಬಿಇಒ ಸಿದ್ದಲಿಂಗಯ್ಯ ಇತರರಿದ್ದರು. 
ಜಿಲ್ಲೆ

ಪಟೇಲ್‌ರ ದಿಟ್ಟತನದಿಂದ ಸ್ವಾತಂತ್ರ್ಯ

ಕುರುಗೋಡು: ಸರ್ದಾರ್ ವಲ್ಲಭ್‌ಬಾಯಿ ಪಟೇಲ್ ಅವರ ಅಪರೇಷನ್ ಪೋಲೋದಿಂದಾಗಿ ಹೈದರಾಬಾಬ್ ಪ್ರಾಂತ್ಯಕ್ಕೆ ಭಾರತ ಒಕ್ಕೂಟ ವ್ಯವಸ್ಥೆಗೆ ಸೇರಿತು ಎಂದು ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಹೇಳಿದರು.

ಏಳು ಜಿಲ್ಲೆಗಳಿಗೆ ಸ್ವಾತಂತ್ರ್ಯದ ಸಂಭ್ರಮ

ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಹೈದರಾಬಾದ್ ರಾಜ್ಯವನ್ನು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಳಿಸಲು ನಿಜಾಮರು ನಿರಾಕರಿಸಿದನು. ಆಗ ಪಟೇಲ್ ಅವರ ದಿಟ್ಟತನದಿಂದ ನಿಜಾಮರ ವಿರುದ್ಧ ಪೊಲೀಸ್ ಕ್ರಮದಿಂದ ಹೈದರಾಬಾದ್ ಪ್ರಾಂತ್ಯ 17 ಸೆಪ್ಟೆಂಬರ್ 1948ರಂದು ಸ್ವತಂತ್ರೃವಾಯಿತು. ಈ ದಿನವನ್ನು ಕರ್ನಾಟಕ ಸರ್ಕಾರವು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಎಂದು ಆಚರಿಸಲಾಗುತ್ತಿದೆ. ನಂತರ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗಿಂದು ಸ್ವಾತಂತ್ಯದ ಸಂಭ್ರಮ ಎಂದರು.

ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಬಿಇಒ ಸಿದ್ದಲಿಂಗಯ್ಯ, ಪಿಎಸ್‌ಐ ಲೋಕರಾಜ್, ದೈಹಿಕ ಶಿಕ್ಷಣ ಶಿಕ್ಷಕ ಶಾಂತಾನಾಯಕ್, ವಿಎಗಳಾದ ಯಮನೂರಪ್ಪ, ರಮೇಶ, ತೋಟಗಾರಿಕೆ ಅಧಿಕಾರಿ ವಿರುಪಾಕ್ಷ ಇತರರಿದ್ದರು.