ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಜೆಡಿಎಸ್ ಕಿಂಗ್ವೆುೕಕರ್ ಸ್ಥಾನ ಅಲಂಕರಿಸಿದೆ. ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸಂಸದ-ಶಾಸಕರ ಬಲದೊಂದಿಗೆ ಬಿಜೆಪಿ ಸಮಬಲ ಸಾಧಿಸಿದೆ. ಹೀಗಾಗಿ, ಅಧಿಕಾರದ ಗದ್ದುಗೆ ಏರಲು ದಳಪತಿಗಳ ಜತೆಗಿನ ದೋಸ್ತಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅನಿವಾರ್ಯವಾಗಿದೆ. ಈಗಾಗಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಟ್ಟಿಗೆ ಮಾತನಾಡಿದ್ದು, ಬಿಜೆಪಿ ಆಡಳಿತದ ಚುಕ್ಕಾನಿ ಹಿಡಿಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ. ಆದರೆ. ಬಿಜೆಪಿಯವರ್ಯಾರು ನನ್ನನ್ನು ಸಂರ್ಪಸಿಲ್ಲ. ಕಾಂಗ್ರೆಸ್ನವರು ಸಂರ್ಪಸಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಹೀಗಾಗಿ, ಜೆಡಿಎಸ್ನವರ ಬೆಂಬಲ ಯಾರಿಗೆ ಎನ್ನುವ ವಿಷಯ ಕುತೂಹಲ ಮೂಡಿಸಿದೆ.
ಬಿಜೆಪಿ ಸಂಪರ್ಕಿಸಿಲ್ಲ, ಕಾಂಗ್ರೆಸ್ ಸಂಪರ್ಕಿಸಿದೆ: ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಚಾರದಲ್ಲಿ ಬಿಜೆಪಿಯ ಯಾರೂ ನನ್ನ ಜತೆ ಮಾತಾನಾಡಿಲ್ಲ. ಆದರೆ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತಾಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳುವ ಮೂಲಕ ಕಾಂಗ್ರೆಸ್ ಕಡೆ ಒಲವು ತೋರಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ಎಚ್.ಡಿ.ಕುಮಾರಸ್ವಾಮಿ ಜತೆ ಮಾತಾಡಿರಬಹುದು, ನನ್ನ ಜತೆ ಯಾವ ಬಿಜೆಪಿ ನಾಯಕರೂ ಮಾತನಾಡಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. ಈ ವಿಷಯದಲ್ಲಿ ಆತುರವೇನಿಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯದೆ ನಾವೇ ತೀರ್ಮಾನ ಮಾಡಬಾರದು ಎಂದು ಕುಮಾರಸ್ವಾಮಿಗೆ ಸೂಚಿಸಿದ್ದೇನೆ ಎಂದರು. ಖರ್ಗೆಯವರು, ಅವರ ಪಕ್ಷದವರನ್ನೇ ಸಂರ್ಪಸಿ ಮಾತಾಡಿದ್ದಾರೆ ಅನ್ಸುತ್ತೆ, ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಕೂತು ಮಾತನಾಡುತ್ತಾರೇನೋ ನೋಡೋಣ ಎಂದರು.
ಅಲ್ಲಿ ನಿರೀಕ್ಷಿಸಿರಲಿಲ್ಲ!: ಕಲಬುರಗಿ ಪಾಲಿಕೆಯಲ್ಲಿ 4 ಸೀಟ್ ಬರುತ್ತದೆಂದು ಅಂದುಕೊಂಡಿರಲಿಲ್ಲ. ಕುಮಾರಸ್ವಾಮಿ ಮಾತ್ರ ಅಲ್ಲಿಗೆ ಹೋಗಿ ಪ್ರಚಾರ ಮಾಡಿದ್ದರು. ಆದರೂ ನಾಲ್ಕು ಸ್ಥಾನ ಬಂದಿರುವುದು ವಿಶೇಷ ಎಂದ ಎಚ್ಡಿಡಿ, ಜೆಡಿಎಸ್ ಎಲ್ಲಿಯೂ ಇಲ್ಲವೇ ಇಲ್ಲ ಅನ್ನುವ ಸ್ಥಿತಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿಯಲ್ಲಿ ನಮ್ಮ ಸ್ಥಿತಿ ಚೆನ್ನಾಗಿರಲಿಲ್ಲ. ಅಲ್ಲಿ ಬಿಜೆಪಿ ಸ್ವೀಪ್ ಮಾಡಿದೆ, ಕಾಂಗ್ರೆಸ್ ಬಗ್ಗೆ ಮಾತಾಡಲು ಹೋಗಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ 3-4 ಸೀಟ್ ನಿರೀಕ್ಷೆ ಮಾಡಿದ್ದೇವು. ಆದರೆ, ಒಂದು ಸೀಟ್ ಬಂದಿದೆ ಎಂದರು.
ಬಿಜೆಪಿಗೆ ಅಧಿಕಾರ ಸಾಧ್ಯತೆ: ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಮೊದಲ ಬಾರಿಗೆ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗಳಿಸಿದ್ದು, ಮೈತ್ರಿ ಪ್ರಸ್ತಾಪಕ್ಕೆ ಜೆಡಿಎಸ್ ಒಲವು ತೋರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಿಳಿಸಿದರು. ಬೆಂಗಳೂರಿನ ಆರ್.ಟಿ.ನಗರದ ನಿವಾಸದ ಬಳಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದಾಗ ಪರಸ್ಪರ ಕೈಜೋಡಿಸುವ ವಿಷಯ ಔಪಚಾರಿಕವಾಗಿ ಪ್ರಸ್ತಾಪವಾಗಿದೆ. ಎಚ್ಡಿಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸ್ಥಳೀಯ ನಾಯಕರೊಂದಿಗೆ ರ್ಚಚಿಸಿ ಸೂಕ್ತ ತೀರ್ವನಕ್ಕೆ ಬರಲಾಗುವುದು ಎಂದಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜತೆ ಸೇರಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿವೆ ಎಂದರು.
ಬೆಳಗಾವಿ: ಪಾಲಿಟಿಕಲ್ ಪಾರ್ಟಿಯ ಮೊದಲ ಮೇಯರ್ ಯಾರಾಗಲಿದ್ದಾರೆ? ಹೀಗೊಂದು ಚರ್ಚೆ ಇಲ್ಲಿನ ರಾಜಕೀಯ ವಲಯದಲ್ಲಿ ಆರಂಭಗೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಮೇಯರ್ ಗದ್ದುಗೆಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ‘ನಾವೂ ಏನು ಕಮ್ಮಿ ಇಲ್ಲ’ ಎಂದು ಮಹಿಳೆಯರೂ ಪ್ರಯತ್ನ ಆರಂಭಿಸಿದ್ದಾರೆ. 1984ರಿಂದ 2019ರವರೆಗೆ ನಡೆದ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಬೆಂಬಲಿತ ಪಕ್ಷೇತರ ಸದಸ್ಯರೇ ಆಯ್ಕೆಯಾಗುತ್ತಿದ್ದರು. ಮೇಯರ್, ಉಪಮೇಯರ್ ಸ್ಥಾನವನ್ನೂ ಅವರೇ ಅಲಂಕರಿಸುತ್ತ ಬಂದಿದ್ದರು. ಯಾವುದೇ ರಾಜಕೀಯ ಪಕ್ಷಗಳು ಈವರೆಗೂ ಪಾಲಿಕೆಯಲ್ಲಿ ಅಧಿಕಾರ ನಡೆಸಿಲ್ಲ. ಅಲ್ಲದೆ, ಪಕ್ಷದ ಚಿಹ್ನೆಯಡಿ ಚುನಾವಣೆಯನ್ನೂ ಎದುರಿಸಿರಲಿಲ್ಲ. ಹೀಗಾಗಿ ಪಕ್ಷದ ಚಿಹ್ನೆಯಲ್ಲಿ ಮೊದಲ ಮೇಯರ್, ಉಪಮೇಯರ್ ಸ್ಥಾನ ಅಲಂಕರಿಸಿದ ಖ್ಯಾತಿ ಗಿಟ್ಟಿಸಿಕೊಳ್ಳಲು ಹಾಗೂ ಪಾಲಿಕೆಯ ಇತಿಹಾಸ ಪುಟಗಳಲ್ಲಿ ತಮ್ಮ ಹೆಸರು ದಾಖಲಿಸಿಕೊಳ್ಳಲು ಆಕಾಂಕ್ಷಿಗಳು ಪ್ರಯತ್ನಿಸುತ್ತಿದ್ದಾರೆ. ಮೇಯರ್ ಸ್ಥಾನ ಸಾಮಾನ್ಯ ವರ್ಗ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಬಿಜೆಪಿ ಸದಸ್ಯರಲ್ಲಿ ಪೈಪೋಟಿ ಏರ್ಪಟ್ಟಿದೆ. ಸ್ಥಾನ ಗಿಟ್ಟಿಸಲು ಸದಸ್ಯರು ಶಾಸಕರು, ಸಚಿವರ ಬೆನ್ನಿಗೆ ಬೀಳುತ್ತಿದ್ದು, ಅವರ ಮನವೊಲಿಸುವ ಕಸರತ್ತು ಆರಂಭಿಸಿದ್ದಾರೆ.