ಜಿಲ್ಲೆ

ಕೈಕಂಬ-ಪೊಳಲಿ ರಸ್ತೆ ದುರಸ್ತಿ

ಸೌಮ್ಯ ಆರ್

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಿಂದ ಪೊಳಲಿಯವರೆಗೆ ಹದಗೆಟ್ಟ ರಸ್ತೆಯ ದುರಸ್ತಿ ಕೆಲಸ ಸೋಮವಾರದಿಂದ ಆರಂಭಗೊಂಡಿದೆ. ಕೈಕಂಬ ಪೊಳಲಿ ದ್ವಾರದ ಬಳಿಯಿಂದಲೇ ಹೊಂಡಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು, ಈ ರಸ್ತೆಯುಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ಬಿ.ಸಿ.ರೋಡಿನ ಕೈಕಂಬ ದ್ವಾರದ ಬಳಿಯಿಂದ ಆರಂಭಗೊಳ್ಳುವ ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡಗಳು ತುಂಬಿಕೊಂಡು ಸಂಚಾರ ಅಸಹನೀಯವಾಗಿತ್ತು. ಈ ರಸ್ತೆ ಪೊಳಲಿ, ಕಟೀಲು ದೇವಸ್ಥಾನ, ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತಿದ್ದು ನಿತ್ಯ ನೂರಾರು ವಾಹನಗಳ ಸಂಚಾರವಿರುತ್ತದೆ. ಹದಗೆಟ್ಟ ರಸ್ತೆಯ ದುರವಸ್ಥೆಯ ಬಗ್ಗೆ ವಿಜಯವಾಣಿ ಶನಿವಾರದ ಸಂಚಿಕೆಯಲ್ಲಿ ಇಲ್ಲಿ ಕುಣಿದಾಡಿಕೊಂಡು ಸಂಚಾರ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿ ಪ್ರಕಟವಾದ ಬೆನ್ನಿಗೆ ಎಚ್ಚೆತ್ತುಕೊಂಡ ಪಿಡಬ್ಲ್ಯುಡಿ ಇಲಾಖೆ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ.