ಜಿಲ್ಲೆ

ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಕಾಗೇರಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನವದೆಹಲಿಯ ಸಂಸತ್ ಭವನದಲ್ಲಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಸೋಮವಾರ ಆಯೋಜನೆಯಾಗಿದ್ದ 18ನೇ ಲೋಕಸಭೆಯ ಅಽವೇಶನದಲ್ಲಿ ಅವರು ಪರಮೇಶ್ವರನ ಹೆಸರಿನಲ್ಲಿ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ಕಾಗೇರಿ ಪರಿಚಯ

1961ರ ಜುಲೈ 10 ರಂದು ಶಿರಸಿಯ ಕಾಗೇರಿ ಎಂಬಲ್ಲಿ ಜನಿಸಿದ ವಿಶ್ವೇಶ್ವ ಅನಂತ ಹೆಗಡೆ ಅವರಿಗೆ ಈಗ 62 ವರ್ಷ. ತಮ್ಮ ವಿದ್ಯಾರ್ಥಿ ಜೀವನದಿಂದಲೇ ಹೋರಾಟ, ಜನಸೇವೆ ರಾಜಕೀಯಕ್ಕೆ ಧುಮುಕಿದ ಕಾಗೇರಿ 1994 ರಿಂದ ಸತತವಾಗಿ ಶಾಸಕರಾಗಿದ್ದು, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಈ ಲೋಕಸಭೆ ಚುನಾವಣೆಯ ಗೆಲುವು ಅವರಿಗೆ 2023 ರ ವಿಧಾನಸಭೆ ಚುನಾವಣೆ ಸೋಲಿನ ಕಹಿಯನ್ನು ಮರೆಸಿದೆ.
ಅಡಕೆ ಕೃಷಿಕರ ಮಗನಾಗಿ ಜನಿಸಿದ ವಿಶ್ವೇಶ್ವರ ಕಾಗೇರಿ ಇದುವರೆಗೂ ತಮ್ಮ ಕೃಷಿಯ ನಂಟನ್ನು ಉಳಿಸಿಕೊಂಡಿರುವುದು ವಿಶೇಷ. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ತಮ್ಮ ಹಳ್ಳಿ ಮನೆಯಲ್ಲೇ ಹೋಗಿ ವಾಸ್ತವ್ಯ ಮಾಡುವ ವಿಶ್ವೇಶ್ವರರು ಕೊನೆಕೊಯ್ಲ, ಕೊಟ್ಟಿಗೆ ಕೆಲಸ, ಕಶಾಯ ಮುಂತಾದ ಅಡಕೆ ಕೃಷಿಕರ ಕಾಯಂ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.
ಸ್ಪೀಕರ್, ಸಚಿವರಾಗಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುವ ಸ್ವಭಾವದಿಂದ ಪ್ರಸಿದ್ಧರಾಗಿದ್ದಾರೆ. ಒಂದೇ ಒಂದು ಕಪು÷್ಪ ಚುಕ್ಕೆ ಇಲ್ಲದೇ, ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳಿಂದ ದೂರ ಇದ್ದು, ಅಽಕಾರ ನಡೆಸಿ, ಸಜ್ಜನ, ಸುಸಂಸ್ಕೃತ ರಾಜಕಾರಣಿ ಎನಿಸಿಕೊಂಡಿದ್ದಾರೆ. ಎಲ್ಲರ ಕರೆ ಸ್ವೀಕರಿಸಿ, ವೈಯಕ್ತಿಕ ಕಾರ್ಯಗಳಿಗಿಂತ ಸಾರ್ವಜನಿಕ ಕೆಲಸಗಳಿಗೆ ಒತ್ತು ಕೊಡುವ ಮೂಲಕ ಮತ್ತೆ ಮತ್ತೆ ಅಽಕಾರ ಹಿಡಿಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಎಬಿವಿಪಿಯಿಂದ ಸಂಸತ್‌ವರೆಗೆ:

ಊರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ನಂತರ ಅವರು ಬಿ.ಕಾಂ.ಪದವಿಯನ್ನು ಪಡೆದರು. ತಮ್ಮ ವಿದ್ಯಾರ್ಥಿ ದಿಸೆಯಲ್ಲಿ ಎಬಿವಿಪಿಯ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದ ಕಾಗೇರಿ ಪದವಿ ಶಿಕ್ಷಣದ ಬಳಿಕ ಸಂಘಟನೆಯ ಪೂರ್ಣಾವಽ ಕಾರ್ಯಕರ್ತರಾಗಿ ದುಡಿದರು. ನಂತರ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಕೆಲ ವರ್ಷಗಳಲ್ಲಿ ವಿದ್ಯಾರ್ಥಿ ಸಂಘಟನೆಯಿAದ ಬಿಜೆಪಿಯತ್ತ ಮುಖ ಮಾಡಿದ ಕಾಗೇರಿ 1994 ರಲ್ಲಿ ಅವರು ಮೊದಲ ಬಾರಿಗೆ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದರು. ನಂತರವೂ ಎರಡು ಬಾರಿ ಎಂದರೆ, 1999 ಹಾಗೂ 2004 ರಲ್ಲೂ ಅವರು ಅಂಕೋಲಾದಿAದಲೇ ಶಾಸಕರಾದರು.
2008 ರ ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ಅಂಕೋಲಾವು ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ವಿಲೀನವಾಗಿತ್ತು. ಎಸ್‌ಸಿಗೆ ಮೀಸಲಾಗಿದ್ದ ಶಿರಸಿ ವಿಧಾನಸಭಾ ಕ್ಷೇತ್ರವು 2 ಸಾಮಾನ್ಯಕ್ಕೆ ತೆರೆದುಕೊಂಡಿತ್ತು. ಹಾಗಾಗಿ ಕಾಗೇರಿ ಅಂಕೋಲಾದಿAದ ಶಿರಸಿಗೆ ಶಿಫ್ಟ್ ಆದರು. ಮತ್ತೆ ಗೆಲುವಿನ ಓಟ ಮುಂದುವರಿಸಿದರು.
2008, 2013 ಹಾಗೂ 2018 ವಿಧಾನಸಭಾ ಚುನಾವಣೆಗಲ್ಲಿ ಸತತವಾಗಿ ಗೆದ್ದ ಕಾಗೇರಿ ಅವರಿಗೆ 2023 ರಲ್ಲಿ ಶಿರಸಿಯ ಜನ ಸೋಲಿನ ಋಚಿ ತೋರಿಸಿದ್ದರು. ಕಾಗೇರಿ ಅತಿಯಾದ ಆತ್ಮವಿಶ್ವಾಸದಿಂದ ತಮ್ಮ ಸಾಂಪ್ರದಾಯಿಕ ಎದುರಾಳಿ ಭೀಮಣ್ಣ ನಾಯ್ಕ ಅವರ ಎದುರು ಅಲ್ಪ ಮತದಲ್ಲಿ ಸೋಲು ಕಂಡಿದ್ದರು.

ಸಚಿವ, ಸ್ಪೀಕರ್ ಆಗಿ

2006 ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ವಿಧಾನಸಭೆ ಸಚೇತಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ 2008 ರಿಂದ 13 ರ ಬಿಜೆಪಿ ಸರ್ಕಾರದ ಅವಽಯಲ್ಲಿ ಶಿಕ್ಷಣ ಸಚಿವರಾಗಿದ್ದರು. ಮಕ್ಕಳಿಗೆ ಸೈಕಲ್ ವಿತರಣೆ, ಶೂ, ಶಾಕ್ಸ್ ವಿತರಣೆಯ ನಿರ್ಣಯ ಕೈಗೊಂಡು ಪ್ರಸಿದ್ಧರಾದರು. ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಪ್ರಯತ್ನಿಸಿದರು. 2019 ರ ಜೂನ್‌ನಿಂದ 2023 ರ ಮೇವರೆಗೆ ಕಾಗೇರಿ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು. ಅತ್ಯಂತ ಶಿಸ್ತು, ಸಂಯಮದ ರಾಜಕಾರಣಿ ಎಂದು ಹೆಸರಾದರು.