ಜಿಲ್ಲೆ

ಒಡೆದು ಆಳುವ ಕಾಂಗ್ರೆಸ್-ಬಿಜೆಪಿ ಮೇಲೆ ಗೂಬೆ

Uttara Kannada - Subash Hegde

ಶಿರಸಿ :ರಾಷ್ಟ್ರ ವಾಹಿನಿಗೆ ಅಲ್ಪ ಸಂಖ್ಯಾತರು ಬರದಂತೆ ಮಾಡಿ ಬಿ ಜೆ ಪಿ, ಆರ್ ಎಸ್ ಎಸ್ ಮೇಲೆ ಗೂಬೆ ಕೂರಿಸಿ ಕಾಂಗ್ರೆಸ್ ಒಡೆದು ಆಳುತ್ತಿದೆ,
ಅಲ್ಪಸಂಖ್ಯಾತ ಬಾಹುಲ್ಯ ಇರುವ ಬೂತ್ ಗಳಲ್ಲಿ ಒಂದಂಕಿ ಮತ ಬಿದ್ದರೆ ಮುಂದೆ ಅದೇ ರೀತಿ ಮುಂಬರುವ ದಿನಗಳಲ್ಲಿ ಇದೇ ನಿರ್ಧಾರ ಕೈಕೊಂಡಲ್ಲಿ ವ್ಯವಸ್ಥೆ ಏನಾಗಬಹುದು
ಹಾಗಾಗಿ ಅಲ್ಪಸಂಖ್ಯಾತರು ರಾಷ್ಟ್ರ ದ ಮುಖ್ಯ ವಾಹಿನಿಗೆ ಬರಬೇಕು ಎಂದು ಬಿ ಜೆ ಪಿ ಲೋಕ ಸಭಾ ಅಭ್ಯರ್ಥಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಮುಂದುವರಿದು ಮಾತನಾಡಿ ಮೋದಿಜಿ ನೀಡುವ ರೇಷನ್, ವಾಕ್ಸಿನ್ ಆಯುಷ್ಮಾನ್ ಪ್ರಯೋಜನ ಎಲ್ಲವನ್ನು ಪಡೆದು ಕೊಂಡು ಓಟ್ ಮಾತ್ರ ಬೇರೆಯವರಿಗೆ ಅಂದರೆ ಬಹುಸಂಖ್ಯಾತರು ಅದೆಯೋಚನೆ ಮಾಡಿದರೆ ಏನಾಗಬಹುದು ಎಂದರು.
ಮೋದಿಜಿ ಕಾರ್ಯಕ್ರಮದ ಕುರಿತು ಕಾರ್ಯಕರ್ತರು, ಸಾರ್ವಜನಿರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಲು ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಬರುವಂತೆ ಆಹ್ವಾನ ನೀಡಬೇಕು ಕಾರ್ಯಕರ್ತರು ಮೊದಲೇ ಆಗಮಿಸಿ ನಮ್ಮನ್ನಮ್ಮ ಭಾಗದಿಂದ ಬಂದ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಮಾಡಿಕೊಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಮಂಡಲದ ಅಧ್ಯಕ್ಷರಾದ ಉಷಾ ಹೆಗಡೆ, ಆನಂದ್ ಸಾಲೆರ್, ಮಾಧ್ಯಮ ವಕ್ತಾರ ಸದಾನಂದ ಭಟ್, ರಮಾಕಾಂತ್ ಭಟ್, ಮಾಲತೇಶ್ ಹಾದಿಮನಿ, ನರಸಿಂಹ ಹೆಗಡೆ, ಮಂಜುನಾಥ್ ಬಂಡಾರಿ ಇದ್ದರು