More

    ಏ. 28 ರಂದು ಶಿರಸಿಯಲ್ಲಿ ಮೋದಿ‌ ಮೋಡಿ

    ಶಿರಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ಮೊದಲ ಬಾರಿ ಶಿರಸಿಗೆ ಏ.28ರಂದು ಆಗಮಿಸಲಿದ್ದಾರೆ. ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
    ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು. ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನಾವು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಪೂರ್ವ ಸಿದ್ಧತಾ ಸಭೆ ನಡೆಸಲಾಗಿದ್ದು, ಕಾರ್ಯಕ್ರಮ ಉತ್ತಮವಾಗಲು 25 ವಿಭಾಗಗಳನ್ನು ರಚಿಸಿ ಅವುಗಳಿಗೆ ಕಾರ್ಯಕರ್ತರನ್ನು ನೇಮಿಸಿ ಜವಾಬ್ದಾರಿ ವಹಿಸಿಕೊಡಲಾಗಿದೆ. ಅದೇ ದಿನ ಬೆಳಗಾವಿ, ದಾವಣೆಗೆರೆಯಲ್ಲಿಯೂ ಮೋದಿಯವರ ಪ್ರಚಾರ ಸಭೆಗಳು ನಡೆಯಲಿವೆ. ಕಿತ್ತೂರು ಮತ್ತು ಖಾನಾಪುರದ ಕಾರ್ಯಕರ್ತರು, ಸಾರ್ವಜನಿಕರಿಗೂ ಶಿರಸಿಯ ಸಭಾ ಕಾರ್ಯಕ್ರಮದಲ್ಲಿಯೇ ಭಾಗಿಯಾಗಲು ವಿನಂತಿಸಿದ್ದೇವೆ. ಒಂದು ಲಕ್ಷಕ್ಕೂ ಅಧಿಕ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಹೀಗಾಗಿ ಸೂಕ್ತ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದರು.
    ವಿಶ್ವೇಶ್ವರ ಹೆಗಡೆ ಕಾಗೇರಿ ಈಗಾಗಲೇ ಶಾಸಕರಾಗಿ, ಸಚಿವರಾಗಿ, ವಿಧಾನ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಕ್ಷೇತ್ರದ ಜನತೆಗೆ ಚಿರಪರಿಚಿತರಾಗಿದ್ದಾರೆ. ಚುನಾವಣಾ ಪ್ರಚಾರ ಕಾರ್ಯವನ್ನು ಈಗಾಗಲೇ ಭರದಿಂದ ನಡೆಸಲಾಗುತ್ತಿದೆ. ಮೊದಲ ಸುತ್ತಿನಲ್ಲಿ ಸಾಧು ಸನ್ಯಾಸಿಗಳು, ಗಣ್ಯರ ಸಭೆ ಮುಗಿಸಿ ಬೂತ್ ಮಟ್ಟದ ಸಭೆಗಳನ್ನು ಮುಗಿಸಿದ್ದಾರೆ. ಎರಡನೇ ಸುತ್ತಿನಲ್ಲಿ 2 ಸಾವಿರಕ್ಕೂ ಅಧಿಕ ಭೂತ್ ಗಳಲ್ಲಿ ಮನೆ ಮನೆ ಸಂಪರ್ಕ ಆರಂಭಿಸಿದ್ದೇವೆ. ಅಭ್ಯರ್ಥಿಗಳ ಮನವಿ ಪತ್ರ ತಲುಪಿಸುತ್ತಿದ್ದೇವೆ. 70 ಮಹಾಶಕ್ತಿ ಕೇಂದ್ರಗಳಲ್ಲಿ ಪ್ರಚಾರ ಸಭೆ ಆರಂಭಿಸಿದ್ದೇವೆ. ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು.
    ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಳೆದ ಭಾರಿ ಅಂಕೋಲಾದ ನರೇಂದ್ರಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರ್ಯಕರ್ತರು ತಮ್ಮ ಹಣದಲ್ಲಿ ಬಸ್ ಬುಕ್ ಮಾಡಿ ಹೋಗಿದ್ದರೂ ಕೇಸ್ ದಾಖಲಿಸಲಾಗಿತ್ತು. ಈ ಕ್ರಮವನ್ನು ಕಾನೂನಾತ್ಮಕವಾಗಿ ನಾವು ಎದುರಿಸುತ್ತೇವೆ ಎಂದರು.
    ಜೆಡಿಎಸ್ ಪ್ರಮುಖ ಉಪೇಂದ್ರ ಪೈ ಮಾತನಾಡಿ”ಪಕ್ಷದ ಹಿರಿಯ ನಾಯಕರ ಸೂಚನೆಯಂತೆ ಜಿಲ್ಲೆಯಲ್ಲಿ ಜೆಡಿಎಸ್ ಜಿಲ್ಲೆಯಲ್ಲಿ ಸಕ್ರೀಯವಾಗಿ ಕಾಗೇರಿ ಗೆಲುವಿಗೆ ಶ್ರಮಿಸುತ್ತಿದ್ದೇವೆ. ನಾವು ಮೈತ್ರಿಕೂಟ ಧರ್ಮ ಪಾಲನೆ ಮಾಡುತ್ತಿದ್ದೇವೆ. ಈ ಬಾರಿ ಪ್ರಚಂಡ ಗೆಲುವು ಕಾಗೇರಿಯವರದ್ದಾಗಲಿದೆ ಎಂದರು.
    ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡಗೋಡ, ಗೋವಿಂದ ನಾಯ್ಕ, ಆರ್. ವಿ. ಹೆಗಡೆ, ಶಿವಾಜಿ ನರ್ಸಾನಿ, ರವಿಚಂದ್ರ ಶೆಟ್ಟಿ ಇತರರಿದ್ದರು.

    ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಅಧಿಕಾರಾವಧಿಯಲ್ಲಿ ಪಾರದರ್ಶಕ ಆಡಳಿತ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ವೆಂಕಟೇಶ ಹೆಗಡೆ ಅವರ ಸರ್ಟಿಪಿಕೇಟ್ ಕಾಗೇರಿಯವರಿಗೆ ಬೇಕಾಗಿಲ್ಲ. ಜನ ನೀಡುವ ತೀರ್ಮಾನದ ಸರ್ಟಿಫಿಕೇಟ್ ಜೂ.4 ಕ್ಕೆ ಸಿಗಲಿದೆ.

    ಹರಿಪ್ರಕಾಶ ಕೋಣೆಮನೆ, ಬಿಜೆಪಿ ರಾಜ್ಯ ವಕ್ತಾರ

    ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮನವಿ ನೀಡಲು ತೆರಳಿದ್ದರೆ ಜಿಲ್ಲಾಧಿಕಾರಿ ಗಂಗೂಬಾಯಿ ಮನವಿ ಸ್ವೀಕರಿಸಲು ಕಚೇರಿಯಿಂದ ಹೊರ ಬಂದಿಲ್ಲ. ಮಹಿಳೆಯಾಗಿ ಅವರು ಮಹಿಳೆಯರಿಗಾಗುತ್ತಿರುವ ಅನ್ಯಾಯಕ್ಕೆ ಸ್ಪಂದಿಸಿಲ್ಲ.- ಎನ್. ಎಸ್. ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ.


    ಪ್ರಧಾನಿ ನರೇಂದ್ರ ಮೋದಿಯವರು ಶಿರಸಿಗೆ ಮೊದಲ ಬಾರಿ ಆಗಮಿಸುತ್ತಿದ್ದಾರೆ. ನಿರೀಕ್ಷೆ ಮೀರಿ ಜನ ಸೇರುವ ಸಾಧ್ಯತೆ ಇದೆ.

    ಸದಾನಂದ ಭಟ್ ನಿಡಗೋಡ, ಜಿಲ್ಲಾ ವಕ್ತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts