ಜಿಲ್ಲೆ

ಕಬಡ್ಡಿಗೆ ಸಿಕ್ಕಿದೆ ಸಾಕಷ್ಟು ಪ್ರೋತ್ಸಾಹ : ಉದ್ಘಾಟಿಸಿ ಕಿಶೋರ್ ಆಳ್ವ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಹಿಂದಿನ ದಿನಗಳಲ್ಲಿ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಇರಲಿಲ್ಲ. ಆದರೆ ಇಂದು ಕಬಡ್ಡಿಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ ಎಂದು ಅದಾನಿ ಫೌಂಡೇಶನ್ ಸಮೂಹದ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.

ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ, ಮುಂಬೈ ಮತ್ತು ಕಾಂತಾಬಾರೆ ಬೂದಾಬಾರೆ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಹೊನಲು ಬೆಳಕಿನ ಪುರುಷರ ಮುಕ್ತ 65 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ವಾತನಾಡಿದರು.

ಛತ್ರಪತಿ ಶಿವಾಜಿ ಪುರಸ್ಕೃತ ಕ್ರೀಡಾಪಟು ಜಯ ಎ.ಶೆಟ್ಟಿ ವಾತನಾಡಿ, ಮಣ್ಣಿನಲ್ಲಿ ಆಡುತ್ತಿದ್ದ ಕಬಡ್ಡಿ ಇಂದು ವ್ಯಾಟ್‌ಗೆ ಬಂದಿದೆ. ಕಬಡ್ಡಿಗೆ ಪ್ರಥಮ ಬಾರಿಗೆ ನಾನು ವ್ಯಾಟ್ ಪರಿಚಯಿಸಿದಾಗ ನನಗೆ ವ್ಯಂಗ ವಾಡಿದ್ದರು. ಆದರೆ ಅದೇ ಇಂದು ಬಹಳಷ್ಟು ಮುಂದುವರಿದಿದೆ. ಐಕಳಬಾವ ಕಂಬಳ ಸಮಿತಿ ಕಬಡ್ಡಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಎಂದರು.

ಕ್ರೀಡಾಪಟು ಜಯ ಎ.ಶೆಟ್ಟಿ ಮತ್ತು ಪತ್ನಿ ಛಾಯಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಐಕಳ ಬಾವದ ರವಿಚಂದ್ರ ಡಿ.ಶೆಟ್ಟಿ, ಮುಂಬೈ ಸಮಿತಿಯ ಸುಕುವಾರ ಭಂಡಾರಿ, ಸಂಜೀವ ಶೆಟ್ಟಿ ಸ್ಥಳಂತ ಗುತ್ತು, ಸುರೇಂದ್ರ ಶೆಟ್ಟಿ ಹೊಸಗದ್ದೆ, ಯುಗಪುರುಷದ ಭುವನಾಭಿರಾಮ ಉಡುಪ, ಬೂದಾಬಾರೆ ಕ್ಲಬ್ ಕೋಶಾಧಿಕಾರಿ ದಯೇಶ್ ಕೋಟ್ಯಾನ್, ಚೇತನ್ ಶೆಟ್ಟಿ, ಶರತ್ ಶೆಟ್ಟಿ ಕಿನ್ನಿಗೋಳಿ, ವೀಕ್ಷಕ ವಿವರಣೆಗಾರ ದಿವಾಕರ ಉಪ್ಪಳ, ದೇವಿದಾಸ್ ಶೆಟ್ಟಿ ಶ್ರೀ ಕಲ್ಪ ಉಪಸ್ಥಿತರಿದ್ದರು.

ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಪ್ರಸ್ತಾವನೆಗೈದರು. ಶ್ರೀಶ ಸರಪ್ ಐಕಳ, ಸ್ವರಾಜ್ ಶೆಟ್ಟಿ ವಂದಿಸಿದರು.