ಕಾರ್ಕಳ: ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಜೀವನದಲ್ಲಿ ಯಶಸ್ಸು ಸಾಧ್ಯ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಸೋಲನ್ನು ಮೆಟ್ಟಿ ನಿಂತಾಗ ಗೆಲುವಿನ ಹಾದಿ ಸುಗಮವಾಗುತ್ತದೆ ಎಂದು ಹಿರಿಯ ಕೃಷಿಕ ಬೋಳ ಪಾಲ್ದಡಿ ವಿಟ್ಠಲ ಶೆಟ್ಟಿ ಹೇಳಿದರು.
ಬೋಳಕೋಡಿಯ ನಿಟ್ಟೆ ಶಂಕರ ಅಡ್ಯಂತಾಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬೆಳ್ಮಣ್ ವೃತ್ತ ಮಟ್ಟದ ಕಬಡ್ಡಿ ಪಂದ್ಯಾಟದ ಸಮಾರೋಪದಲ್ಲಿ ಅವರು ಮಾತನಾಡಿದರು.
ಕಬಡ್ಡಿ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಮುಂಡ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆದರೆ, ನಿಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಬೋಳ ಕೋಡಿ ಶಾಲೆ ಪ್ರಥಮ ಸ್ಥಾನಿಯಾದರೆ ಮುಂಡ್ಕೂರು ಸರ್ಕರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನಿಯಾಯಿತು.
ಬೋಳ ಮಾರಗುತ್ತು ಸುಭಾಶ್ ಶೆಟ್ಟಿ, ನರ್ಸು ಮೊಲಿ, ಶ್ರೀಧರ ಶೆಟ್ಟಿ, ಜಗದೀಶ ಶೆಟ್ಟಿ, ಸಚ್ಚೇರಿಪೇಟೆ ಶರತ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕಲ್ಯಾ ವಸಂತ್, ಮಮತಾ ಶೆಟ್ಟಿ, ಶಶಿಕಲಾ, ಬೋಳ ಕುಸಲ್ದ ಜವನೆರ್ ತಂಡದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ವಿಶ್ವಿತ್, ಬೋಳ ಕೋಡಿ ಶಾಲೆ ಮುಖ್ಯ ಶಿಕ್ಷಕ ಎ.ಆರ್.ಲಕ್ಕೊಂಡ, ಸಹ ಶಿಕ್ಷಕರಾದ ಪವಾರ್, ಜಯಶ್ರೀ, ಸಂಧ್ಯಾ, ಲಕ್ಷ್ಮೀ, ಹಳೇ ವಿದ್ಯಾರ್ಥಿ ಸುಪ್ರೀತ್ ಸಪಳಿಗ ಮತ್ತಿತರರಿದ್ದರು. ಸಚ್ಚೇರಿಪೇಟೆ ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಾಲಕರ 9 ಹಾಗೂ ಬಾಲಕಿಯರ 8 ತಂಡ ಭಾಗವಹಿಸಿದ್ದವು.