ಕಾಸರಗೋಡು: ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಕೇರಳದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಹೊಂದಿದ್ದ ನೇತಾರರಾಗಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗೀತಾ ಕೃಷ್ಣನ್ ತಿಳಿಸಿದ್ದಾರೆ.
ಉದುಮ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕೆ.ಕರುಣಾಕರನ್ ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಯಲಿಲ್ ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಆರ್.ವಿದ್ಯಾಸಾಗರ್, ಪಿ.ವಿ.ಉದಯಕುಮಾರ್, ಶಿಬು ಕಡವಂಗಾನಂ, ಕೆ.ವಿ.ರಾಜಗೋಪಾಲನ್, ರಮೇಶ್ ಬೇಕಲ್, ಎಸ್.ವಿ. ರಾಮಕೃಷ್ಣನ್, ಸುನೀಲ್‌ಕುಮಾರ್ ಉದುಮ, ಕೋಟಾನ್ ಕುಞಿಪಂದಲ್, ರಜಾಕ್ ಮಂಗಾಟ್, ಕೊಪ್ಪಳ ಪ್ರಭಾಕರನ್, ಮುಹಮ್ಮದ್ ಕುಞಿ ಪಡಿಂಜಾರ್, ರತೀಶ್ ಞಿಕ್ಕಿಲಿ, ಕಾರ್ತ್ಯಾನಿ ಬಾಬು ಉಪಸ್ಥಿತರಿದ್ದರು.