ಹರಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಪ್ರತ್ಯಕ್ಷವಾದ ಕರಡಿಯನ್ನು ಗ್ರಾಮಸ್ಥರು, ರೈತರು ಗಮನಿಸುತ್ತಿರುವುದು. 
ಜಿಲ್ಲೆ

ಕೆ.ಕಲ್ಲಹಳ್ಳಿ ಜಮೀನಿನಲ್ಲಿ ಕರಡಿ ಪ್ರತ್ಯಕ್ಷ

Kopala - Desk - Eraveni

ಹರಪನಹಳ್ಳಿ: ತಾಲೂಕಿನ ಕೆ.ಕಲ್ಲಹಳ್ಳಿಯ ರೈತ ಗೌಡ್ರು ಚನ್ನವೀರಪ್ಪನವರ ಜೊಳದ ಜಮೀನಿನಲ್ಲಿ ಮಂಗಳವಾರ ಕರಡಿ ಪ್ರತ್ಯೇಕ್ಷವಾಗಿದ್ದು, ಜನರು ಆತಂಕಗೊಂಡಿದ್ದರೆ.

ರೈತ ಹೋಲಕ್ಕೆ ತೆರಳುವ ವೇಳೆ ಕರಡಿ ಕಾಣಿಸಿಕೊಂಡ ಹಿನ್ನೆಲೆ ಭಯಭೀತನಾಗಿ ಬೇರೆ ರೈತರನ್ನು ಕೂಗಿ ಕರೆಯುವಷ್ಟರಲ್ಲಿ ಜಮೀನಿನಲ್ಲಿ ಅವಿತುಕೊಂಡಿದೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿದೆ. ಅರಣ್ಯ ಸಿಬ್ಬಂದಿ ಬೋನ್‌ನ್ನು ಇಡಲು ಪ್ರಯತ್ನ ನಡೆಸಿದ್ದಾರೆ.

ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ ಪ್ರತಿಕ್ರಿಯಿಸಿ, ಇಲಾಖೆಯ ಸಿಬ್ಬಂದಿ ಮೂಲಕ ಪರಿಶೀಲಿಸಿ, ಕರಡಿಯನ್ನು ಹಿಡಿಯಲು ಬೋನ್ ಅಳವಡಿಸಲು ಮುಂದಾಗುವುದಾಗಿ ತಿಳಿಸಿದರು. ಈ ಹಿಂದೆ ಗ್ರಾಮದ ಹಳ್ಳದ ಬಳಿ ಯುವಕನ ಮೇಲೆ ಕರಡಿ ದಾಳಿ ಮಾಡಿತ್ತು ಎಚ್ಚೆತ್ತ ಅರಣ್ಯ ಇಲಾಖೆ ಬೋನ್ ಅಳವಡಿಸಿ, ಕರಡಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.