ಕುಮಾರ್  
ಜಿಲ್ಲೆ

ಪಶು ವೈದ್ಯಕೀಯ ಪರೀಕ್ಷಕನಿಗೆ ನ್ಯಾಯಾಂಗ ಬಂಧನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ರೋಗಿಗೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಆರೋಪದಲ್ಲಿ ಬಂಧಿತರಾದ ಅರಸಿನಮಕ್ಕಿ ಪಶುಚಿಕಿತ್ಸಾ ಕೇಂದ್ರದ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕುಮಾರ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸೋಮವಾರ ಸಂಜೆ ಕೊಕ್ಕಡ ವೃತ್ತದಲ್ಲಿ ಪಶು ವೈದ್ಯಕೀಯ ಪರೀಕ್ಷಕ ಕುಮಾರ್ ಎಂಬುವರು ಹಲ್ಲೆ ನಡೆಸಿದ ಪರಿಣಾಮ ಬೆಳ್ತಂಗಡಿ ತಾಲೂಕಿನ ಪಟ್ರಮೆ ನಿವಾಸಿ ಕೃಷ್ಣಪ್ಪ (58) ಎಂಬುವರು ಬಿದ್ದು ಮೃತಪಟ್ಟಿದ್ದರು ಎನ್ನಲಾಗಿತ್ತು. ಘಟನೆ ಕುರಿತಂತೆ ಮೃತರ ಪತ್ನಿ ಭಾರತಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಮೇ 14ರಂದು ಬಂಧಿಸಲಾಗಿತ್ತು. ಬೆಳ್ತಂಗಡಿ ಗ್ರಾಮಾಂತರ ವೃತ್ತನಿರೀಕ್ಷಕ ವಸಂತ ಆರ್.ಆಚಾರ್ ಮತ್ತು ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.