ಜಿಲ್ಲೆ

ಹೆಬ್ರಿ ಕಸಾಪದಿಂದ ದುರ್ಗಾಕ್ಕೆ ಚಾರಣ

ಇಂದಿರಾ ಎನ್ ಕೆ

ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕ ಆಶ್ರಯದಲ್ಲಿ ಹೆಬ್ರಿಯ ತಾಲೂಕಿನ ಪಶ್ಚಿಮ ಘಟ್ಟದ ಬೆಟ್ಟದಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯ ಶ್ರೀ ಕ್ಷೇತ್ರ ದುರ್ಗಕ್ಕೆ ಚಾರಣ ಮತ್ತು ದುರ್ಗದಲ್ಲೊಂದು ಆಶು ಕವನಗೋಷ್ಠಿ ಭಾನುವಾರ ನಡೆಯಿತು.

ಶ್ರೀ ಕ್ಷೇತ್ರ ದುರ್ಗದ ಪ್ರಮುಖರಾದ ಸತೀಶ್ ಬಾಯರಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.

ಮಂಜುನಾಥ ಕೆ.ಶಿವಪುರಗೋಷ್ಠಿಯ ಸಮನ್ವಯಕಾರರಾಗಿತ್ತರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ರಾಧಕೃಷ್ಣ ರಾವ್, ಗಣೇಶ ಹಾಂಡ, ಕವಿಗಳಾದ ಮಹೇಶ ಹೈಕಾಡಿ, ಶೋಭಾ ಆರ್.ಕಲ್ಕೂರ್, ನವೀನ ಶೆಟ್ಟಿ ಮಡಾಮಕ್ಕಿ, ಬಾಲಚಂದ್ರ ಸುಬ್ಬಣ್ಣಕಟ್ಟೆ, ಬಾಲಚಂದ್ರ ಹೆಬ್ಬಾರ್, ಪುಪ್ಪಾವತಿ ಹೆಬ್ರಿ, ಸುಮಂಗಲಾ ಭಟ್, ಶ್ರೀಜನ್, ವಿದ್ಯಾ ಜನಾರ್ದನ್ ಉಪಸ್ಥಿತರಿದ್ದರು. ಶಿಕ್ಷಕಿ ರತ್ನಾವತಿ ಪ್ರಾರ್ಥಿಸಿದರು. ಮಹೇಶ ಹೈಕಾಡಿ ಸ್ವಾಗತಿಸಿದರು. ಎಚ್.ಜನಾರ್ದನ ವಂದಿಸಿದರು.