ಮಂಗಳೂರು: ಉಯ್ಯಾಲೆ ಅಂದ್ರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಅದೇ ಉಯ್ಯಾಲೆಯಲ್ಲಿ ಜೀಕಲು ಹೋದ ಬಾಲಕಿಯೊಬ್ಬಲು ಪ್ರಾಣಬಿಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದೆ.
ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಬಾಬು ಅಜಿಲ ಅವರ ಪುತ್ರಿ ಶ್ರುತಿ(11) ಮೃತ ದುರ್ದೈವಿ. ಮನೆ ಸಮೀಪದ ಮರವೊಂದರ ಕೊಂಬೆಗೆ ಸೀರೆಯಲ್ಲಿ ಜೋಕಾಲೆ ಕಟ್ಟಿಕೊಂಡು ಬಾಲಕಿ ಆಟವಾಡುತ್ತಿದ್ದಳು. ಸೀರೆ ರೂಪದಲ್ಲಿ ಕಾದಿದ್ದ ಜವರಾಯ ಬಾಲಕಿಯ ಪ್ರಾಣ ಹೊತ್ತೊಯ್ದಿದ್ದಾನೆ. ಉಯ್ಯಾಲೆಗೆ ಬಳಸಿದ್ದ ಸೀರೆ ಬಾಲಕಿಯ ಕುತ್ತಿಗೆಗೆ ಸುತ್ತಿಕೊಂಡು ಆಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿರಿ ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ…